Janardhan Kodavoor/ Team KaravaliXpress
26.6 C
Udupi
Monday, January 30, 2023
Sathyanatha Stores Brahmavara

ಪ್ರಸಿದ್ದ ಯಕ್ಷಗಾನ ಕಲಾವಿದ ಅಫಘಾತದಲ್ಲಿ ಸಾವು!

ಭಾಗವತ ಹಾಗೂ ರಂಗ ಸಂಗೀತ ಪ್ರವೀಣರಾದ ಬಾಳೆಹದ್ದ ತಿಮ್ಮಪ್ಪ ಹೆಗಡೆ (59) 13-12-2022 ರಂದು ಸಿರ್ಸಿಯಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ನಿಧನ ಹೊಂದಿದರು.ಇವರು ಹೊಸ್ತೋಟ ಮಂಜುನಾಥ ಭಾಗವತರ ಪ್ರಿಯ ಶಿಷ್ಯರಾಗಿದ್ದರು.ಅವರ ತಂದೆ ಸುಪ್ರಸಿದ್ಧ ಭಾಗವತರೂ, ಸಂಗೀತ ತಜ್ಞರೂ ಆಗಿರುವ ಬಾಳೆಹದ್ದ ಕೃಷ್ಣ ಭಾಗವತರಿಗೆ ಈ ಹಿಂದೆ ಸಂಸ್ಥೆ ಸಮ್ಮಾನಿಸಿತ್ತು. ಕಲಾರಂಗದ ಕಾರ್ಯಕ್ರಮಕ್ಕೆ ಹಲವು ಬಾರಿ ಆಗಮಿಸಿದ್ದ ತಿಮ್ಮಪ್ಪ ಹೆಗಡೆಯವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!