Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

ತೆಂಕನಿಡಿಯೂರು ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರರ

ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಐ.ಕ್ಯೂ.ಎ.ಸಿ. ಹಾಗೂ ಎನ್.ಎಸ್.ಎಸ್. ಮತ್ತು ಸರಕಾರಿ
ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಯುವ ಸಬಲೀಕರಣ ಪರಿಕಲ್ಪನೆಯ ಉನ್ನತ ಶಿಕ್ಷಣ, ಸಂವಹನ ಕೌಶಲಗಳು–ಜೀವನ ಕಲೆ ಹಾಗೂ ಒತ್ತಡ ನಿರ್ವಹಣೆ ಕುರಿತಾದ ಒಂದು ದಿನದ
ಕಾರ್ಯಾಗಾರವನ್ನು ಆಯೋಜಿಸಲಾಯಿತು. ಕಾರ್ಯಾಗಾರ ಉದ್ಘಾಟಿಸಿದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ವಿಶ್ವನಾಥ ಕರಬ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಜ್ಞಾನವೊಂದಿದ್ದರೆ ಸಾಲದು, ಜ್ಞಾನದ ಬಳಕೆಗೆ ಅವಶ್ಯಕವಾದ
ಸಂವಹನ ಕೌಶಲಗಳು, ಬದುಕಿನ ಸವಾಲುಗಳನ್ನು ಎದುರಿಸುವ ಕೌಶಲಗಳು ಹಾಗೂ ಒತ್ತಡ ನಿರ್ವಹಣೆ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮದ ಔಚಿತ್ಯವನ್ನು ತಿಳಿಸಿ ಶುಭ ಹಾರೈಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ರೈ ಕೆ. ವ್ಯಕ್ತಿಯ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಣದ ಸಂದರ್ಭದಲ್ಲಿ ಪದವಿ ಪೂರ್ವ ಹಂತದ ಒಂದು ವರ್ಗಾವಣೆ ಹಂತವಾಗಿದ್ದು ಇಲ್ಲಿ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇದ್ದಲ್ಲಿ ಜೀವನ
ಸನ್ಮಾರ್ಗದಲ್ಲಿರುತ್ತದೆ ಎಂದರು. ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ಮೇವಿ ಮಿರಾಂದ, ಎನ್.ಎಸ್.ಎಸ್. ಯೋಜನಾಧಿಕಾರಿ ಶ್ರೀಮತಿ ಸುಷ್ಮಾ ಟಿ, ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ, ಪ್ಲೇಸ್‌ಮೆಂಟ್ ಸೆಲ್ ಸಂಚಾಲಕ ಶ್ರೀ ಉಮೇಶ್ ಪೈ ತೆಂಕನಿಡಿಯೂರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ವಾಸು ಮೊಗೇರ್, ಪ್ರಮೀಳಾ, ಛಾಯಾ, ಜಯಶ್ರೀ, ರೀನಾ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾಗಿ ಪ್ರಶಾಂತ್ ಎನ್., ಒತ್ತಡ ನಿರ್ವಹಣೆ ಕುರಿತಾಗಿ ಡಾ. ಮೇವಿ ಮಿರಾಂದ, ಜೀವನಕಲೆ ಕುರಿತಾಗಿ
ಯುವ ಸ್ಪಂದನದ ತರಬೇತುದಾರರಾದ ಜ್ಯೋತಿ ಪ್ರಶಾಂತ್ ಹಾಗೂ ಸಂವಹನ ಕಲೆಯ ಕುರಿತಾಗಿ ಡಾ. ಗೀತಾ ಎನ್. ತರಬೇತಿ ನೀಡಿದರು. ತರಬೇತಿಯಲ್ಲಿ ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪ್ರಯೋಜನ ಪಡೆದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!