Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಸಮಾಜಕಾರ್ಯ ಗ್ರಾಮೀಣ ಶಿಬಿರ ಸಂಪನ್ನ

ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಇಲ್ಲಿನ ಪ್ರಥಮ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳ ಸಮಾಜಕಾರ್ಯ ಗ್ರಾಮೀಣ ಶಿಬಿರವು ಇತ್ತೀಚೆಗೆ ಸಮಾರೋಪಗೊಂಡಿತು. ಶ್ರೀಮತಿ ರುಕ್ಮಿಣಿ ಶೆಡ್ತಿ ಮೆಮೊರಿಯಲ್ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಶ್ರೀದೇವಿ ಕೆ. ಇವರು ಸಮಾರೋಪ ಭಾಷಣದಲ್ಲಿ “ಸಮಾಜಕಾರ್ಯ ಶಿಬಿರವು ಇತರ ಶಿಬಿರಗಳಿಗಿಂತ ಭಿನ್ನವಾಗಿದ್ದು ಸಮಾಜಕಾರ್ಯ ತಂತ್ರಗಳನ್ನು ಅಭ್ಯಾಸ ಮಾಡುವ ಮತ್ತು ಸಮುದಾಯವನ್ನು ಅರ್ಥಮಾಡಿಕೊಳ್ಳುವ ತಂತ್ರಗಳು, ಜಾಗೃತಿ ಮೂಡಿಸುವ ವಿಷಯಗಳೇ ಪ್ರಾಮುಖ್ಯವಾಗಿರುತ್ತವೆ” ಎಂದರು. ಮಾತನ್ನು ಮುಂದುವರೆಸುತ್ತಾ ಎಲ್ಲಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಂಚಾಲಕರಾದ ಡಾ.ದುಗ್ಗಪ್ಪ ಕಜೆಕಾರ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾರ್ಥಿ ಕು. ಅನುಷ ಎ.ಎಸ್ ಶಿಬಿರದ ವರದಿ ವಾಚಿಸಿದರು. ಕು. ರಕ್ಷಿತಾ ಸ್ವಾಗತಿಸಿದರು. ಕು. ದೀಪಾ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾಧಿಕಾರಿ ಶ್ರೀಮತಿ ಸುಷ್ಮಾ ಟಿ. ಧನ್ಯವಾದ ಅರ್ಪಿಸಿದರು.
ವೇದಿಕೆಯಲ್ಲಿ ಕಲ್ಯಾಣಪುರ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಟಿ. ಸೀತಾ, ಚೈತನ್ಯ ಚಾರಿಟೇಬಲ್ ಟ್ರಸ್ಟ್ನ ಸ್ಪಂದನ ವಿಶೇಷ ಶಾಲೆಯ ಅಧ್ಯಕ್ಷರಾದ ಶ್ರೀ ಉಮೇಶ್ ನಾಕೂರು, ಕೋಶಾಧಿಕಾರಿ ಶ್ರೀ ವಿವೇಕ ಕಾಮತ್, ಗೊರೆಟ್ಟಿ ಆಸ್ಪತ್ರೆಯ ಸಮಾಜಕಾರ್ಯಕರ್ತರಾದ ಶ್ರೀ ರಾಕೇಶ್ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಸಮಾಜಕಾರ್ಯ ಉಪನ್ಯಾಸಕರಾದ ಡಾ. ಪ್ರಮೀಳ ಜೆ. ವಾಜ್, ಶ್ರೀ ರಾಜೇಂದ್ರ ಎಂ, ಶ್ರೀಮತಿ ಉಷಾ, ಶ್ರೀ ರವಿ. ಎಸ್. ಶ್ರೀಮತಿ ಸಹನ ಎಸ್, ಕು.ಸುಮತಿ ಬಿಲ್ಲವ, ಶ್ರೀಮತಿ ಶ್ರೀಕಲಾ ಕುಮಾರಿ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!