Janardhan Kodavoor/ Team KaravaliXpress
27.6 C
Udupi
Saturday, July 2, 2022
Sathyanatha Stores Brahmavara

ಫೇಸ್ ‌ಬುಕ್‌ ನಲ್ಲಿ ತ್ರಿವಳಿ ತಲಾಖ್ ಹೇಳಿದಾತ ಪೊಲೀಸರ ವಶ

ಉಡುಪಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತನ್ನ ಪತ್ನಿಗೆ ತ್ರಿವಳಿ  ತಲಾಖ್ ಸಂದೇಶ ಅಪ್ ಲೋಡ್ ಮಾಡಿದ್ದ ಆರೋಪ ಎದುರಿಸಿರುವ  ಪತಿ ಮಹಾಶಯ ಪೊಲೀಸರ ವಶವಾದ ಘಟನೆ ಶಿರ್ವದಲ್ಲಿ ಸಂಭವಿಸಿದೆ. ಶಿರ್ವ  ನಿವಾಸಿ ಶೇಕ್ ಮೊಹಮ್ಮದ್ ಸಲೀಂ ಬಂಧಿತ ಆರೋಪಿ.

ಆತ ಶಿರ್ವ ಜಾಮಿಯಾ ಮಸೀದಿ ಸಮೀಪದ  ಸ್ವಪ್ನಾಸ್ ಎಂಬವರನ್ನು 2010ರ ಸೆ. 23ರಂದು ಶಿರ್ವದಲ್ಲಿ ವಿವಾಹ ವಾಗಿದ್ದ. ಬಳಿಕ ಪತಿ ಮತ್ತು ಮಗಳು ಅನಾಸ್ ಜೊತೆ ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿ ವಾಸವಾಗಿದ್ದ. ಕಳೆದ  ಆ. .3ರಂದು ಸಲೀಂ ತನ್ನ ಪತ್ನಿ ಹಾಗೂ ಮಗಳನ್ನು ದಮ್ಮಾಮ್ ನಲ್ಲಿಯೇ ಬಿಟ್ಟು ಇನ್ನೊಬ್ಬಾಕೆಯೊಂದಿಗೆ  ಮುಂಬೈಗೆ ಆಗಮಿಸಿದ್ದ. ನಂತರ ಫೇಸ್ ಬುಕ್ ಪ್ರೊಫೈಲ್ ನಲ್ಲಿ ಪತ್ನಿಯನ್ನುದ್ದೇಶಿಸಿ ಟ್ರಿಪ್ಪಲ್ ತಲಾಖ್ ಎಂಬ ಸಂದೇಶ ಅಪ್ ಲೋಡ್ ಮಾಡಿದ್ದಾಗಿ ದಮ್ಮಾಮ್ ನಲ್ಲಿರುವ ಪತ್ನಿ ಸ್ವಪ್ನಾಸ್ ಶಿರ್ವ ಪೊಲೀಸ್ ಠಾಣೆಗೆ ಆನ್ ಲೈನ್ ಮೂಲಕ ದೂರು ದಾಖಲಿಸಿದ್ದು, ಸಲೀಂ ವಿರುದ್ಧ  ಪ್ರಕರಣ ದಾಖಲಾಗಿತ್ತು.

ಆ. 5ರಂದು ಮುಂಬೈಯಿಂದ ಊರಿಗೆ ಬಂದಿದ್ದ ಆರೋಪಿ ಸಲೀಂನನ್ನು ಶಿರ್ವ ಪೊಲೀಸರು ಆ. 7ರಂದು ಶಿರ್ವದಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ, ಆರೋಪಿಯನ್ನು ಆ.21ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!