Janardhan Kodavoor/ Team KaravaliXpress
26.6 C
Udupi
Monday, June 27, 2022
Sathyanatha Stores Brahmavara

ಉಗ್ರ ತಾಲಿಬ್ ಹುಸೇನ್ ಬೇನಾಮಿ ನಂಬರ್​ನಿಂದ ಸಂಪರ್ಕ ಮಾಡುತ್ತಿದ್ದ.

ಬೆಂಗಳೂರು: ಬೆಂಗಳೂರಿನಲ್ಲಿ ಸೋಮವಾರ ಬಂಧಿತನಾಗಿರುವ, ಕೇಂದ್ರ ಭದ್ರತಾ ಪಡೆಗಳ ಹಿಟ್​ಲಿಸ್ಟ್​ನಲ್ಲಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ತಾಲಿಬ್ ಹುಸೇನ್ ಬೆಂಗಳೂರಿನಲ್ಲಿ ಕುಳಿತು ಬೇರೆಯವರ ಹೆಸರಿನಲ್ಲಿರುವ ಮೊಬೈಲ್ ನಂಬರ್ ಬಳಸುತ್ತಾ ಜಮ್ಮು- ಕಾಶ್ಮೀರದಲ್ಲಿರುವ ಸಂಬಂಧಿಕರೊಂದಿಗೆ ಸಂಭಾಷಣೆ ನಡೆಸುತ್ತಿದ್ದ. ಇದೇ ಆತನಿಗೆ ಮುಳುವಾಯಿತು.

 ತಾಲೀಬ್ ಮೊಬೈಲ್ ಮೂಲಕ ನಿರಂತರವಾಗಿ ಕಾಶ್ಮೀರದ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರುವ ಮಾಹಿತಿ ಪಡೆದ ಜಮ್ಮು- ಕಾಶ್ಮೀರ ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ಸ್ ಪಡೆ ಮೊಬೈಲ್ ಸಿಗ್ನಲ್ ಜಾಡು ಹಿಡಿದು ಬೆಂಗಳೂರಿಗೆ ಆಗಮಿಸಿ ಗಾಂಧಿನಗರದ ಲಾಡ್ಜ್​ನಲ್ಲಿ ವಾಸ್ತವ್ಯ ಹೂಡಿ ತಾಲಿಬ್ ಹುಸೇನ್ ಬೆನ್ನತ್ತಿದ್ದರು.

ಫೋಟೋ ಹಿಡಿದು ಜಾಲಾಡಿ ಉಗ್ರನನ್ನು ಗುರುತಿಸಿ ಚಲನವಲನದ ಮಾಹಿತಿ ಸಂಗ್ರಹಿಸಿ ಕರ್ನಾಟಕ ಪೊಲೀಸರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಇತ್ತ ಮೇಲಧಿಕಾರಿಯಿಂದ ಸೂಚನೆ ಬರುತ್ತಿದಂತೆ ಎಚ್ಚೆತ್ತ ಶ್ರೀರಾಂಪುರ ಪೊಲೀಸರು, ಫೀಲ್ಡ್​ಗೆ ಇಳಿದು ತಾಲಿಬ್ ಹುಸೇನ್ ಫೋಟೋ ಸ್ಥಳೀಯರಿಗೆ ತೋರಿಸಿ ಎಲ್ಲಿದ್ದಾನೆ? ಯಾರ ಸಂಪರ್ಕದಲ್ಲಿ ಇದ್ದಾನೆ? ಆಶ್ರಯ ಕೊಟ್ಟವರು ಯಾರು? ಎಂದೆಲ್ಲ ಮಾಹಿತಿ ಸಂಗ್ರಹಿಸಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!