ಟೆಂಪೋ ಪಲ್ಟಿ : ಕಾಲೇಜು ವಿದ್ಯಾರ್ಥಿನಿ ಪ್ರಿನ್ಸಿಟಾ ಸ್ಥಳದಲ್ಲೇ ಸಾವು

ಹೊನ್ನಾವರ : ಇಡಗುಂಜಿ ನಗರ ಬಸ್ತಿಕೇರಿ ರಸ್ತೆಯ ಮೂಲಕ ಸಂಶಿಯ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಟೆಂಪೋವನ್ನು ಚಲಾಯಿಸಿಕೊಂಡು ಬಂದ ವೇಳೆ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿ ಕಾಲೇಜು ವ್ಯಾಸಂಗ ಮಾಡುತ್ತಿದ್ದ ಪ್ರಿನ್ಸಿಟಾ ಪ್ರಾನ್ಸಿಸ್ ಮಿರಾಂಡ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. 
 
ಪಿಯದಾದ ಲೋಪಿಸ್, ರೇಕಲ್ ಮಿರಾಂಡ, ಕೇರಾ ಮಿರಾಂಡ, ರೇಖಾ ಮಾರಿಯೋ ಮಿರಾಂಡ, ಲೆನ್ಸಿಟಾ ಮಿರಾಂಡ, ಪಿಲೋಮಿನಾ ಮಿರಾಂಡ ಇವರು ಗಾಯಗೊಂಡಿದ್ದಾರೆ. ಗಾಯಳುಗಳನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
 
 
 
 
 
 
 
 
 
 
 

Leave a Reply