​​ಸಖಿ ​ಒನ್ ಸ್ಟಾಪ್ ಸೆಂಟರ್  ಯೋಜನೆಯ ಜಿಲ್ಲಾ ಟಾಸ್ಕ್ ಪೋರ್ಸ್ ​ಸಮಿತಿಗೆ ತಾರಾ ಆಚಾರ್ಯ

ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಸೇವೆ, ಆಪ್ತ ಸಮಾಲೋಚನೆ, ಪೊಲೀಸ್ ಸೇವೆ, ಕಾನೂನು ಸೇವೆ, ತಾತ್ಕಾಲಿಕ ವಸತಿಗಳನ್ನು ಒದಗಿಸುವ ಕೇಂದ್ರಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸಖಿ ವನ್ ಸ್ಟಾಪ್ ಸೆಂಟರ್.

ಉಡುಪಿಯ ರಾಜ್ಯ ಮಹಿಳಾ ನಿಲಯ (ಸ್ಟೇಟ್ ಹೋಮ್)ದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರದ ಉಸ್ತುವಾರಿಗೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಇದೆ. ಈ ಸಮಿತಿಗೆ ತಾರಾ ಉಮೇಶ್ ಆಚಾರ್ಯ ಅವರು ನಾಮನಿರ್ದೇಶಿತ ಸದಸ್ಯರಾಗಿ ನೇಮಿಸಲ್ಪಟ್ಟಿದ್ದಾರೆ.

ಅವರು ಈ ಸಮಿತಿಯ ಮೂಲಕ ನೊಂದ, ಅಸಹಾಯಕ ಮಹಿಳೆಯರ ಕಣ್ಣೀರು ಒರೆಸುವ, ಅವರು ಮುಂದಿನ ಬದುಕನ್ನು ನಡೆಸುವುದಕ್ಕೆ ದೈರ್ಯ ತುಂಬುವ ಕೆಲಸವನ್ನು ಮಾಡಲಿದ್ದಾರೆ. 
 
 
 
 
 
 
 
 
 
 
 

Leave a Reply