ಮಂದಾರ್ತಿ ತಂತ್ರಾಡಿ  ಗುಡ್ಡೆಯಂಗಡಿ ರಸ್ತೆ ದುರಸ್ತಿ ಮಾಡದೆ ಸತಾಯಿಸುತ್ತಿರುವ ಜಿಲ್ಲಾಡಳಿತ.?

ಹೆಗ್ಗುಂಜೆ ಮತ್ತು ಕಾಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೩ಕಿ.ಮೀ ತಂತ್ರಾಡಿ ಗುಡ್ಡೆಯಂಗಡಿ ರಸ್ತೆಯ ದುರಸ್ತಿ ಯಾವಾಗ ಎಂದು ಗ್ರಾಮಸ್ಥರು, ವಾಹನ ಸವಾರರು ಪರಿತಪಿಸುವಂತಾಗಿದೆ. ಮಂದಾರ್ತಿ ತಂತ್ರಾಡಿ ಮತ್ತು ಕಾಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಯಂಗಡಿ  ಸಂಪರ್ಕ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಸಂಚಾರ ಮಾಡುವುದ ಹರಸಾಹಸವಾಗಿದೆ. 
ಈ ರಸ್ತೆಯು ಡಾಮರು ಕಾಣದೇ ವರ್ಷಗಳೇ ಕಳೆದಿವೆ. ಮಂದಾರ್ತಿಯಿಂದ  ನೀಲಾವರಕ್ಕೆ ಕೇವಲ ೬ಕಿ.ಮೀನಲ್ಲಿ ತಲುಪಬಹುದು. ಇಲ್ಲವಾದರೆ ಸುಮಾರು ೧೭ಕಿ.ಮೀ ಸುತ್ತಿ ಬಳಸಿ ಬರಬೇಕಾಗಿದೆ. ಇದು ನೀಲಾವರ ಮಾತ್ರ ವಲ್ಲದೇ ಆರೂರು, ಉಪ್ಪೂರು ಮತ್ತು ನೂತನವಾಗಿ ನಿರ್ಮಾಣವಾಗಿರುವ ಶೀಂಬ್ರ ಸೇತುವೆ ಮೂಲಕ ಮಣಿಪಾಲ ಉಡುಪಿ ತಲುಪಲು ಬಹು ಸಮೀಪವಾಗಿದೆ. 
ಆದ್ದರಿಂದ ಈ ೩ಕಿ.ಮೀನ ಈ ಸಂಪರ್ಕ ರಸೆಯಲ್ಲ್ತಿ ದಿನನಿತ್ಯ  ಹಲವಾರು ವಾಹನಗಳು ಸಂಚರಿಸುತ್ತದೆ. ಮಾತ್ರವಲ್ಲದೇ ಈ ರಸ್ತೆಯು ಕಾಡುದಾರಿಯಾಗಿದ್ದು ರಾತ್ರಿ ಹೊತ್ತಿನಲ್ಲಿ ಅಂತೂ ಸಂಚರಿಸುವುದು ತುಂಬಾ ಕ್ಲಿಷ್ಟಕರವಾಗಿದೆ. ಸರಿಯಾದ ದಾರಿ ದೀಪದ ವ್ಯವಸ್ಥೆ ಇಲ್ಲ.
ಇದ್ದ ಕೆಲವು ಸೋಲಾರ್ ದೀಪಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆದರೂ ಕೂಡ ಈ ರಸ್ತೆಯ ಬಗ್ಗೆ ಯರೂ ತಲೆಕೆಡಿಸಿಕೊಂಡAತಿಲ್ಲ. ಅತೀ ಶೀಘ್ರದಲ್ಲಿ ರಸ್ತೆಯನ್ನು ದುರಸ್ತಿ ಮಾಡುವಂತೆ ಈ ಭಾಗದ ಗ್ರಾಮಸ್ಥರು ಮತ್ತು ವಾಹನ ಸವಾರರು ಆಗ್ರಹಿಸಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಾಗಿ  ಮಾಡಿಕೊಡುವಲ್ಲಿ ಮುತುವರ್ಜಿವಹಿಸಬೇಕಾಗಿದೆ. ಆದಷ್ಟು ಬೇಗನೆ ದುರಸಿಗೊಳ್ಳುತ್ತದೆ ಎನ್ನುವುದು ಸಾರ್ವಜನಿಕರ ಆಶಯ.ತಂತ್ರಾಡಿ ರಸ್ತೆಯು ವರ್ಷಗಳಿಂದ ಡಾಮರು ಕಾಣಲಿಲ್ಲ. ರಸ್ತೆಯಲ್ಲಿ ಸಂಚರಿಸಲು ಬಹಳ ಕಷ್ಟವಾಗುತ್ತಿದೆ. ರಾತ್ರಿ ಹೊತ್ತಿನಲ್ಲಿ ದಾರಿ ದೀಪದ ವ್ಯವಸ್ಥೆಯು ಸರಿಯಾಗಿಲ್ಲದ ಕಾರಣ ಸಂಚರಿಸಲು ಭಯವಾಗುತ್ತದೆ. ಆದಷ್ಟು ಶೀಘ್ರದಲ್ಲಿ ರಸ್ತೆ ದುರಸ್ತಿ ಮಾಡಬೇಕಾಗಿದೆಎಂದು  ತಂತ್ರಾಡಿ ಗ್ರಾಮಸ್ಥೆ ನಯನ ಶರ್ಮ ಹೇಳುತ್ತಾರೆ 

ತಂತ್ರಾಡಿ ಗುಡ್ಡೆಯಂಗಡಿ ರಸ್ತೆಯು ಬಹಳ ಹಿಂದೇಯೇ ದುರಸ್ತಿಯಾಗಬೇಕಾಗಿದ್ದು, ರಸ್ತೆಯು ಈಗ ತೀರಾ ಹದಗೆಟ್ಟಿದೆ. ಈಗಾಗಲೇ ರಸ್ತೆಯ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದು, ಅವರು ಕೂಡ ಸ್ಪಂದಿಸಿದ್ದು, ಅತೀ ಶೀಘ್ರದಲ್ಲಿ ದುರಸ್ತಿ ಮಾಡುವ ಭರವಸೆ ನೀಡಿದ್ದಾರೆ ಎಂದು ಹೆಗ್ಗುಂಜೆ ಗ್ರಾಮ ಪಂಚಾಯಿತ್  ಮಾಜಿ ಅಧ್ಯಕ್ಷ  ಗಣೇಶ್ ಶೆಟ್ಟಿ ಅಭಿಪ್ರಾಯ ವ್ಯಕ್ತ ಪಡಿಸಿದರು. 

 
 
 
 
 
 
 
 
 
 
 

Leave a Reply