ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಸಾಹಿತ್ಯ ಸಂಘ ಸೂಕ್ತ ವೇದಿಕೆ – ನೀಲಾವರ ಸುರೇಂದ್ರ ಅಡಿಗ

‌ಪ್ರತಿಯೊಬ್ಬ ವಿದ್ಯಾರ್ಥಿ ಯಲ್ಲಿಯೂ ಪ್ರತಿಭೆ ಇರುತ್ತದೆ.ಅದನ್ನು ಸರಿಯಾಗಿ ಗುರುತಿಸುತ್ತಿಲ್ಲ ಜೊತೆಗೆ ಸರಿಯಾದ ವೇದಿಕೆ ಸಿಗುತ್ತಿಲ್ಲ ,ಸಾಹಿತ್ಯ ಸಂಘ ಇಂತಹ ಪ್ರತಿಭೆಗಳನ್ನು ಗುರುತಿಸುವ ,ಪ್ರೋತ್ಸಾಹಿಸುವ ಸೂಕ್ತವೇದಿಕೆಯಾಗಿದೆ .ವಿದ್ಯಾರ್ಥಿ ಗಳು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ಅಭಿಪ್ರಾಯ ಪಟ್ಟರು.
ಅವರು ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲಿನಲ್ಲಿ ಸಾಹಿತ್ಯ ಸಂಘವನ್ನು ಉದ್ಘಾಟಿಸಿ ಶಿಕ್ಷಣದ ಜೊತೆಗೆ ಸಹಪಠ್ಯ ಚಟುವಟಿಕೆಗಳಿಗೆ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು .
ಇನ್ನೊರ್ವ ಸಾಹಿತಿ ಜಯಲಕ್ಷ್ಮೀ ಆಚಾರ್ಯ ಶಂಕರನಾರಾಯಣ ರವರು ಬಿಡುವಿನ ಸಮಯದಲ್ಲಿ ಕಾದಂಬರಿ,ಕಥೆ‌,ಕವನ‌,ರಾಮಾಯಣ ,ಮಹಾಭಾರತ ಮುಂತಾದ ಪುಸ್ತಕಗಳನ್ನು ಓದುವುದರಿಂದ ನಮ್ಮಲ್ಲಿ ಮೌಲ್ಯಗಳು ಹೆಚ್ಚಾಗುತ್ತದೆ ಎಂದು ಹೇಳಿದರು.
‌‌ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲ ವಡ್ಡರ್ಸೆ ಪ್ರಕಾಶ್ ಆಚಾರ್ಯರು ವಹಿಸಿದ್ದರು.ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕರಾದ ಸುಯೋಗ್ ಹೆಗ್ಡೆ ,ಕಾರ್ಯದರ್ಶಿ ನಳಿನಿ ಎಂ ರಾವ್ ,ಸಾಹಿತ್ಯ ಸಂಘ ದ ನಿರ್ದೇಶಕಿ ಸುಭಿಕ್ಷ ಮೇಡಂ , ಸಾಂಸ್ಕೃತಿಕ ಕಾರ್ಯದರ್ಶಿ ಪ್ರಖ್ಯಾತ್ ಶೆಟ್ಟಿ, ಸಾಹಿತ್ಯ ಸಂಘದ ಅಧ್ಯಕ್ಷೆ ಪ್ರಕೃತಿ ಶೆಟ್ಟಿ, ಕಾರ್ಯದರ್ಶಿ ಸುಕನ್ಯಾ ಕಾಮತ್ ಉಪಸ್ಥಿತರಿದ್ದರು.
ವಡ್ಡರ್ಸೆ ಪ್ರಕಾಶ್ ಆಚಾರ್ಯರು ಸ್ವಾಗತಿಸಿದರು. ಸುಭೀಕ್ಷಾ ಮೇಡಂ ವಂದಿಸಿದರು. ವಿದ್ಯಾರ್ಥಿ ಗಳಾದ ಮನೀಷಾ ಶೆಟ್ಟಿ ಹಾಗೂ ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.
‌‌ಉದ್ಘಾಟನೆಯ ನಂತರ ಹತ್ತನೆಯ ತರಗತಿಯ ವಿದ್ಯಾರ್ಥಿ ಗಳಿಂದ ಹತ್ತನೆಯ ತರಗತಿಯ ಕನ್ನಡ ಪಠ್ಯ ಪುಸ್ತಕದ ಶಬರಿ ಪಾಠವನ್ನು ನಾಟಕ ರೂಪದಲ್ಲಿಯೂ ಹಾಗೂ ಸಂಕಲ್ಪಗೀತೆ ಮತ್ತು ಹಕ್ಕಿ ಹಾರುತಿದೆ ನೋಡಿದಿರಾ ಎಂಬ ಪದ್ಯಗಳನ್ನು ನಾಟ್ಯ ರೂಪದಲ್ಲಿಯೂ ಪ್ರದರ್ಶನ ಮಾಡಲಾಯಿತು.

 
 
 
 
 
 
 
 
 
 
 

Leave a Reply