ಕಾಂಗ್ರೆಸ್ ನ ಸತೀಶ್ ಜಾರಕಿ ಹೊಳಿ ವಿರುದ್ಧ ಜಿಲ್ಲೆಯಾದ್ಯಂತ ದೂರು :ಬೈಕಾಡಿ ಸುಪ್ರಸಾದ್ ಶೆಟ್ಟಿ

 ಹಿಂದೂ ಎಂದರೆ ಅಶ್ಲೀಲ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 153ಎ ಪ್ರಕಾರ ಜಾತಿ ಧರ್ಮಗಳ ಮಧ್ಯೆ ದ್ವೇಷ ಹುಟ್ಟಿಸಿ ಸಾರ್ವಜನಿಕ ಅಶಾಂತಿ ಮೂಡಿಸಿರುವುದಕ್ಕೆ ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಗುವುದು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ,ನ್ಯಾಯವಾದಿ ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದರು.

        ದೇವತೆಗಳ ಗುರುಗಳಾದ ಬೃಹಸ್ಪತಿ ಪುರಾಣದಲ್ಲಿ ಭಾರತದ ಹಿಮಾಲಯದಿಂದ ಹಿಂದೂ ಮಹಾಸಾಗರದ ವರೆಗಿನ ಭೂಭಾಗವು ಹಿಂದೂ ರಾಷ್ಟ್ರ ಎನ್ನುವಂಥ ಉಲ್ಲೇಖ ಆಗಿದ್ದು ಇಡೀ ಜಗತ್ತೇ ಹಿಂದೂ ರಾಷ್ಟ್ರ ವನ್ನು ಸ್ವೀಕರಿಸಿದೆ ಎಂದು ಬೈಕಾಡಿ ಸುಪ್ರಸಾದ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಸರಕಾರ ಇರುವಾಗಲೇ ಸರಕಾರ ನಿಯಂತ್ರಣದ ಸಂಸ್ಥೆಯಾಗಿರುವ ಎಚ್ ಎಂ ಟಿ, ಎಚ್ ಇ ಎಲ್, ರಾಷ್ಟ್ರೀಯ ದೈನಿಕವಾಗಿರುವ ದಿ ಹಿಂದೂ ಪತ್ರಿಕೆ ಪ್ರಾರಂಭ ವಾಗಿದ್ದು ಕಾಂಗ್ರೆಸ್ ನಾಯಕರಾಗಿರುವ ಸತೀಶ್ ಜಾರಕಿಹೊಳಿಗೆ ಅಂತಹ ಸಾಮಾನ್ಯ ಜ್ಞಾನ ಇಲ್ಲದಿರುವುದು ವಿಷಾದನೀಯ ಹಾಗೂ ಅವರ ಹೇಳಿಕೆಯಿಂದ ಸಮಸ್ತ ಹಿಂದೂ ಸಮಾಜದ ಭಾವನೆಗೆ ಧಕ್ಕೆಯಾಗಿದ್ದು ಕಾಂಗ್ರೆಸ್ ಪಕ್ಷ ಇಡೀ ದೇಶದ ಹಿಂದೂ ಸಮಾಜದ ಮುಂದೆ ಬೇಷರತ್ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.

Leave a Reply