Janardhan Kodavoor/ Team KaravaliXpress
24.6 C
Udupi
Thursday, September 29, 2022
Sathyanatha Stores Brahmavara

ಸುಮನಸಾ ಕೊಡವೂರು: ಬದ್ಕೆರೆ ಬುಡ್ಲೆ ಪ್ಲೀಸ್ ನಾಟಕ ಮೂಹರ್ತ

ಉಡುಪಿ : ಸುಮನಸಾ ಕೊಡವೂರು ಉಡುಪಿ ಇದರ ನೂತನ ತುಳು ಸಾಮಾಜಿಕ ನಾಟಕ ಬದ್ಕೆರೆ ಬುಡ್ಲೆ ಪ್ಲೀಸ್ ಇದರ ಮುಹರ್ತವೂ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ರವಿವಾರ ಜರಗಿತು. ದೇವಳದ ಅರ್ಚಕ, ವ್ಯವಸ್ಥಾಪನ ಸಮಿತಿಯ ಸದಸ್ಯ ಪ್ರಸಾದ್ ಭಟ್ ಪ್ರಾರ್ಥನೆ ಸಲ್ಲಿಸುವ ಮೂಲಕ ನೇರವೇರಿಸಿದರು.
ಸಾಮಾಜಿಕ ಮುಂದಾಳು, ಪತ್ರಕರ್ತ ಜರ್ನಾದನ್ ಕೊಡವೂರು ಹಾಗೂ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ನಾಟಕಕಾರ ರವಿಕುಮಾರ್ ಕಡೆಕಾರ್ ಅವರು ಉಪಸ್ಥಿತರಿದ್ದು ಶುಭಾ ಹಾರೈಸಿದರು.

ಬದ್ಕೆರೆಬುಡ್ಲೆ ಪ್ಲೀಸ್ ನಾಟಕದ ನಿರ್ದೇಶಕ ಹಾಗೂ ರಚನೆಕಾರ, ಪರ್ತಕರ್ತ ನಾಗರಾಜ್ ವರ್ಕಾಡಿ ಅವರು ಕೃತಿಯನ್ನು ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಅವರಿಗೆ ಹಸಾಂ್ತತರಿಸಿದರು.

ಈ ಸಂದರ್ಭದಲ್ಲಿ ಸುಮನಸಾದ ಗೌರವಾಧ್ಯಕ್ಷ ಎಮ್.ಎಸ್. ಭಟ್, ಸಂಚಾಲಕರಾದ ಭಾಸ್ಕರ್ ಪಾಲನ್ ಬಾಚನಬೈಲು, ಪದಾಧಿಕಾರಿಗಳಾದ ವಿನಯ್ ಕುಮಾರ್ ಕಲ್ಮಾಡಿ, ಯೋಗೀಶ್ ಕೊಳಲಗಿರಿ, ಮನೋಹರ್ ಕಲ್ಮಾಡಿ, ಚಂದ್ರಕಾoತ್ ಕುಂದರ್, ನೂತನ್ ಕುಮಾರ್, ದಿವಾಕರ್ ಕಟೀಲ್, ಹರೀಶ್ ಕಲ್ಯಾಣಪುರ , ಸುಮನಸಾದ ಸದಸ್ಯರು ಹಾಗೂ ಕಲಾವಿದರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!