Janardhan Kodavoor/ Team KaravaliXpress
31.6 C
Udupi
Wednesday, December 8, 2021
Sathyanatha Stores Brahmavara

ಉಡುಪಿ ಸುಲ್ತಾನ್‌ ಗೋಲ್ಡ್‌ ಜುವೆಲರಿಯಲ್ಲಿ ಚಿನ್ನಾಭರಣ ಕಳವು

ಉಡುಪಿ:​ ​ಜ್ಯುವೆಲ್ಲರಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆಯೊಬ್ಬರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುಗೈದು ಪರಾರಿಯಾಗಿರುವ ಘಟನೆ ನ.23ರಂದು ಸಂಜೆ ವೇಳೆ ನಡೆದಿದೆ.​ 

ನಗರದ ವಿದ್ಯಾಸಮುದ್ರ ಮಾರ್ಗ ಬಳಿ ಇರುವ ಸುಲ್ತಾನ್ ಡೈಮಂಡ್ ಗೋಲ್ಡ್ ಜುವೆಲ್ಲರಿ ಅಂಗಡಿಗೆ ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ಬಂದಿದ್ದು, ​ಸೇಲ್ಸ್ ಮ್ಯಾನ್ ಬಳಿ ಚಿನ್ನದ ಬಳೆಗಳನ್ನು ತೋರಿಸುವಂತೆ ಹೇಳಿದ್ದರು.

ಬೇರೆ ಬೇರೆ ಬಳೆಗಳನ್ನು ನೋಡುತ್ತಿದ್ದ ಮಹಿಳೆಯರು ಸೇಲ್ಸ್‌ಮೆನ್ ಗಮನವನ್ನು ಬೇರೆಡೆಗೆ ಸೆಳೆದು ಒಟ್ಟು 60 ಗ್ರಾಂ ತೂಕದ 4 ಚಿನ್ನದ ಬಳೆಗಳನ್ನು ಮೋಸದಿಂದ ತೆಗೆದುಕೊಂಡು ಹೋಗಿದ್ದಾರೆ.

ಇದರ ಒಟ್ಟು ಮೌಲ್ಯ 3,00,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!