Janardhan Kodavoor/ Team KaravaliXpress
24.6 C
Udupi
Tuesday, July 5, 2022
Sathyanatha Stores Brahmavara

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರ್ ನಿರ್ಮಾಣಕ್ಕೆ ಸಚಿವ ಮುರುಗೇಶ್ ನಿರಾಣಿ ಬೆಂಬಲ

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನರ್ ನಿರ್ಮಾಣ ಮಾಡಿ ಸಕ್ಕರೆ ಮತ್ತು ಇಥೆನಾಲ್ ಘಟಕದ ಪ್ರಾರಂಭಕ್ಕೆ ಆರ್ಥಿಕ ನೆರವು ನೀಡಬೇಕೆಂದು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ಅವರು ಕರ್ನಾಟಕ ಸರಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಡಾ. ಮುರುಗೇಶ್ ನಿರಾಣಿ ಅವರಲ್ಲಿ ಮನವಿ ಮಾಡಿಕೊಂಡರು.
ವಾರಾಹಿ ನೀರಾವರಿ ಯೋಜನೆ ಮತ್ತು ಇನ್ನಿತರ ಸೌಲಭ್ಯಗಳನ್ನು ಕ್ರೋಡೀಕರಿಸಿಕೊಂಡು ಹತ್ತು ಸಾವಿರ ಎಕರೆಗೂ ಮಿಕ್ಕಿ ಕಬ್ಬನ್ನು ಬೆಳೆಯುವ ವ್ಯವಸ್ಥೆಯನ್ನ ಕಾರ್ಖಾನೆಯ ನೇತೃತ್ವದಲಿೢ ಮಾಡಲಾಗುವುದು ಎಂದು ಸುಪ್ರಸಾದ್ ಶೆಟ್ಟಿ ಯವರು ಭರವಸೆಯನ್ನು ನೀಡಿದರು ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರಾದ ಮುರುಗೇಶ್ ನಿರಾಣಿಯವರು ಇಥೆನಾಲ್ ಉತ್ಪಾದನಾ ಘಟಕಕ್ಕೆ ನೂತನ ಪಾಲಿಸಿ ಯ ಪ್ರಕಾರ ಪೂರ್ಣ ಪ್ರಮಾಣದ ಸಾಲದ ನೆರವನ್ನು ನೀಡಿ ಕಾರ್ಖಾನೆಯನ್ನು ಪುನರ್ ನಿರ್ಮಾಣಗೊಳಿಸುವ ಭರವಸೆ ನೀಡಿದರು .ಈ ಸಂದರ್ಭದಲ್ಲಿ ಉಡುಪಿಯ ಶಾಸಕರಾದ ಕೆ ರಘುಪತಿ ಭಟ್ ,ಚೇಂಬರ್ ಆಫ್ ಕಾಮರ್ಸ್ ಉಡುಪಿಯ ಅಧ್ಯಕ್ಷರಾದ ಅಂಡಾರು ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು .

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!