ಸುಗಂಧಿ” ಕನ್ನಡ ಚಲನ ಚಿತ್ರದ ಪ್ರೀಮಿಯರ್ ಶೋ ಉದ್ಘಾಟನೆ: ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಕೋಟ

ಕೋಟ : ಕಡಲ ತಡಿಯ ಭಾರ್ಗವ ಡಾ. ಕೋಟ ಶಿವರಾಮ ಕಾರಂತರ ಆದರ್ಶ ಮತ್ತು ಮಾರ್ಗದರ್ಶನದ ಅಂಶಗಳನ್ನು ಚಲನ ಚಿತ್ರಗಳಲ್ಲಿ ಅಳವಡಿಸಿದರೆ, ಸಮಾಜಕ್ಕೆ ಅದೊಂದು ಉತ್ತಮ ಸಂದೇಶ ತಲುಪಿಸಿದಂತೆ. ಸುಗಂಧಿ ಚಿತ್ರ ತಂಡ ಈ ಸ್ತುತ್ಯರ್ಹ ಕಾರ್ಯವನ್ನು ಮಾಡಿದೆ. ಕಾರಂತರ ಊರಿನವರೇ ಆದ ಸಮಾನ ಮನಸ್ಕರ ಈ ಕಾರ್ಯ ಸಾರಸ್ವತ ಲೋಕಕ್ಕೊಂದು ದೊಡ್ಡ ಕಾಣಿಕೆ. ಬಾಲ ಕಲಾವಿದೆ ವೈಷ್ಣವಿ ಅಡಿಗ ಮನೋಜ್ಞವಾಗಿ ಅಭಿನಯಿಸಿದ್ದಾಳೆ. ಒಟ್ಟಿನಲ್ಲಿ ಸುಗಂಧಿ ಚಲನ ಚಿತ್ರ ಕಾರಂತರ ಜೀವಂತಿಕೆಯನ್ನು ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದೆ. ಸರ್ವರೂ ಚಿತ್ರ ನೋಡಿ, ತಂಡದದವರನ್ನು ಪ್ರೋತ್ಸಾಹಿಸಬೇಕು ಎಂದು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟದ ಸಮಾನ ಮನಸ್ಕ ಆಸಕ್ತರು ಕೂಡಿ ನಿರ್ಮಿಸಿದ “ಸುಗಂಧಿ” ಕನ್ನಡ ಚಲನ ಚಿತ್ರದ ಪ್ರೀಮಿಯರ್ ಶೋ ವನ್ನು ಕೋಟೇಶ್ವರದ ಭಾರತ್ ಸಿನಿಮಾಸ್‌ನ ಮಲ್ಟಿಪ್ಲೆಕ್ಸ್ನಲ್ಲಿ ಭಾನುವಾರ ಉದ್ಘಾಟಿಸಿ ಅವರು ಶುಭ ಹಾರೈಸಿದರು.

ಸುಗಂಧಿ ಚಲನ ಚಿತ್ರದಲ್ಲಿ ಡಾ. ಶಿವರಾಮ ಕಾರಂತರ ಜೀವನ ಕ್ರಮ, ಭಾವನೆ, ಅವರ ಕಾರ್ಯಶೈಲಿ ಹಾಗೂ ಅವರು ಹಾಕಿಕೊಟ್ಟ ಕೆಲವು ಮಾರ್ಗದರ್ಶನದ ಅಂಶಗಳನ್ನು ಪರಿಣಾಮಕಾರಿಯಾಗಿ ಒಡಮೂಡಿಸಲಾಗಿದೆ ಎಂದವರು ಮೆಚ್ಚಿಕೊಂಡರು.

ಶಿಕ್ಷಕ ನರೇಂದ್ರ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಈ ಸುಗಂಧಿ ಸಿನಿಮಾ ೨೦೧೯ರಲ್ಲಿ ನಿರ್ವಾಣವಾಗಿದ್ದು. ೨೦೨೦ರಲ್ಲಿ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚಿಗೆ ಪಡೆದಿರುತ್ತದೆ. ಈ ಸಿನಿಮದಲ್ಲಿ ಡಾ. ಶಿವರಾಮ ಕಾರಂತರ ಯಕ್ಷಗಾನವನ್ನು ಮುಖ್ಯವಾಗಿ ಇಟ್ಟುಗೊಂಡು. ಒಂದು ಚಿಕ್ಕ ಬಾಲಕಿ ಯಕ್ಷಗಾನ ಕಲಿವಿಕೆಗೆ ಹೋದಾಗ ಅಲ್ಲಿ ಎದುರಾಗುವ ಬೇರೆ ಬೇರೆ ಸಮಸ್ಯೆಗಳು. ಹಾಗೂ ಮುಖ್ಯವಾಗಿ ಶಿಕ್ಷಣ ಎಂದರೆ ಕೇವಲ ಓದುವುದು ಬರೆಯುದು ಮಾತ್ರ ಲೆಕ್ಕಾಚಾರವಾಗದೆ, ಅದರೊಟ್ಟಿಗೆ ಬೇರೆ ವಿಚಾರಗಳನ್ನು ಕಲಿಸಬೇಕು ಎನ್ನುವುದರ ಬಗ್ಗೆ ಈ ಸಿನಿಮಾ ಮಾಡಲಾಗಿದೆ.
ಇಂದು ಪ್ರಿಮೀಯಾರ್ ಶೋ ಭಾರತ್ ಸಿನಿಮದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ.
ವೀಕೆಂಡ್ ಶೋ ಅಂತ ಕಾರಂತ್ ಥೀಮ್ ಪಾರ್ಕ್ನ ಮಿನಿ ಹೋಂ ಥಿಯೇಟರ್‌ನಲ್ಲಿ ಶೋ ಇರುತ್ತದೆ ಇದು ಈ ವರ್ಷ ಅಂತ್ಯದವರೆಗೆ ಪ್ರದರ್ಶನಗೊಳ್ಳಲಿದೆ.ಅಲ್ಲದೆ ನವಂಬರ್ ೧ ರಿಂದ ಪರಿಸರದ ಎಲ್ಲಾ ಶಾಲೆಯ ಮಕ್ಕಳಿಗೆ ಪ್ರದರ್ಶನ ನೀಡುವ ಯೋಜನೆಯನ್ನು ಹೊಂದಿದ್ದೇವೆ ಎಂದರು.

ಸುಗAಧಿ ಸಿನಿಮಾ ವೀಕ್ಷಿಸಿ ಪ್ರೇಕ್ಷಕರು ಸಿನಿಮಾದ ಕುರಿತು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ನೆನಪು ಮೂವಿ ನಿರ್ದೇಶಕ ಹಾಗೂ ಶಿಕ್ಷಕ ನರೇಂದ್ರ ಕುಮಾರ್ ಕೋಟ, ಬಾಲ ಕಲಾವಿದೆ ವೈಷ್ಣವಿ ಅಡಿಗ, ಕಾರಂತ ಪ್ರತಿಷ್ಠಾಪನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಸಾಹಿತಿ ಎ.ಎಸ್.ಎನ್. ಹೆಬ್ಬಾರ್, ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ನೀಲವರ ಸುರೇಂದ್ರ ಅಡಿಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ, ಪತ್ರಕರ್ತ ಯು. ಆರ್. ಶೈಣೆ, ಕೋಟತಟ್ಟು ಗ್ರಾ. ಪಂ. ಅಧ್ಯಕ್ಷೆ ಅಶ್ವಿನಿದಿನೇಶ್, ಕೋ. ಸ. ವ. ಸಂ. ಅಧ್ಯಕ್ಷರಾದ ಜಿ. ತಿಮ್ಮಪೂಜಾರಿ, ವಿವೇಕ ವಿದ್ಯಾ ಸಂಸ್ಥೆ ಪ್ರಾಂಶುಪಾಲರು ಜಗದೀಶ ನಾವುಡ, ಕಾರ್ಯದರ್ಶಿ ರಾಮದೇವ್ ಐತಾಳ್, ತಾರಾನಾಥ್ ಹೊಳ್ಳ ಕಾರ್ಕಡ, ರವಿ ಐತಾಳ್ ಪಾರಂಪಳ್ಳಿ ಹಾಗೂ ಹಲವಾರು ಊರ ಪ್ರಮುಖರು ಉಪಸ್ಥಿತರಿದ್ದರು

ಕೋಟದ ಸಮಾನ ಮನಸ್ಕ ಆಸಕ್ತರು ಕೂಡಿ ನಿರ್ಮಿಸಿದ “ಸುಗಂಧಿ” ಕನ್ನಡ ಚಲನ ಚಿತ್ರದ ಪ್ರೀಮಿಯರ್ ಶೋ ವನ್ನು ಕೋಟೇಶ್ವರದ ಭಾರತ್ ಸಿನಿಮಾಸ್‌ನ ಮಲ್ಟಿಪ್ಲೆಕ್ಸ್ನಲ್ಲಿ ಭಾನುವಾರ ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ನೆನಪು ಮೂವಿ ನಿರ್ದೇಶಕ ಹಾಗೂ ಶಿಕ್ಷಕ ನರೇಂದ್ರ ಕುಮಾರ್ ಕೋಟ, ಬಾಲ ಕಲಾವಿದೆ ವೈಷ್ಣವಿ ಅಡಿಗ, ಕಾರಂತ ಪ್ರತಿಷ್ಠಾಪನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಪ್ರಮುಖರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply