ವಿದ್ಯಾರ್ಥಿ ನಾಪತ್ತೆ

ಉಡುಪಿ, ಆಗಸ್ಟ್ 01 (ಕವಾ) : ಮಣಿಪಾಲದಲ್ಲಿ ಫಾರ್ಮಸಿ ವ್ಯಾಸಾಂಗ ಮಾಡುತ್ತಿದ್ದ ಅಭಯ್ ಕುಮಾರ್ (26) ಎಂಬ ವಿದ್ಯಾರ್ಥಿಯು ಜುಲೈ 27 ರಂದು ರಾತ್ರಿ 9.30 ರ ಸುಮಾರಿಗೆ ಹಾಸ್ಟೆಲ್‌ನಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.

5 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಶರೀರ ಹೊಂದಿದ್ದು, ಹಿಂದಿ ಹಾಗೂ ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2570328, ಮೊ.ನಂ: 9480805475, 9480805448 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಣಿಪಾಲ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 

Leave a Reply