Janardhan Kodavoor/ Team KaravaliXpress
24.6 C
Udupi
Sunday, July 3, 2022
Sathyanatha Stores Brahmavara

ಕರೊನಾ ಸಂಕಷ್ಟದಲ್ಲಿರುವ 3 ಸಾವಿರಕ್ಕೂ ಅಧಿಕ ಸಿನಿಮಂದಿಯ ಸಹಾಯಕ್ಕೆ ರಾಕಿಂಗ್ ಸ್ಟಾರ್

ಬೆಂಗಳೂರು: ಈ ಕರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಸಿನಿಮಾ ಕ್ಷೇತ್ರದವರ ಸಹಾಯಕ್ಕೆ ರಾಕಿಂಗ್ ಸ್ಟಾರ್ ಯಶ್​ ಮುಂದಾಗಿದ್ದಾರೆ. ಕನ್ನಡ ಚಿತ್ರರಂಗದ ಸುಮಾರು 3 ಸಾವಿರ ಜನರ ಖಾತೆಗಳಿಗೆ ತಲಾ 5 ಸಾವಿರ ರೂಪಾಯಿ ಟ್ರಾನ್ಸ್​ಫರ್ ಮಾಡಲು ನಿರ್ಧರಿಸಿದ್ದಾರೆ.

ಕಣ್ಣಿಗೆ ಕಾಣದ ವೈರಸ್ ಮನುಷ್ಯನ ಬದುಕನ್ನು ಬುಡಮೇಲು ಮಾಡಿದೆ. ಅದರಲ್ಲೂ ಕಳೆ ದ ಒಂದು ವರ್ಷದಿಂದ ನನ್ನ ಸಿನಿಮಾ ಕುಟುಂಬ ಅಸಹಾಯಕತೆಯಿಂದ ಕೈಕಟ್ಟಿ ಕುಳಿತಿದೆ. ಇದು ಬರೀ ಮಾತನಾಡುವ ಸಮಯವಲ್ಲ, ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜತೆಗೆ ನಿಲ್ಲುವ ಸಮಯ ಎಂದು ಹೇಳಿರುವ ಅವರು ತಮ್ಮ ಈ ಸಹಾಯವನ್ನು ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ 3 ಸಾವಿರಕ್ಕೂ ಅಧಿಕ ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5 ಸಾವಿರ ರೂಪಾಯಿಯನ್ನು ನನ್ನ ವೈಯಕ್ತಿಕ ಸಂಪಾದನೆಯ ಹಣದಿಂದ ನೀಡುವುದಾಗಿ ಹೇಳಿದ್ದಾರೆ. 

ಈ ಬಗ್ಗೆ ಸಿನಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಸಾ.ರಾ.ಗೋವಿಂದು, ಉಪಾಧ್ಯಕ್ಷ ರವೀಂದ್ರನಾಥ್ ಅವರ ಜತೆ ಚರ್ಚಿಸಿದ್ದು, ಅಧಿಕೃತ ಖಾತೆಗಳ ವಿವರ ಸಿಗುತ್ತಿದ್ದಂತೆ ಹಣ ರವಾನಿಸಲು ಆರಂಭಿಸಲಾಗುವುದು ಎಂದು ಯಶ್​ ಭರವಸೆ ನೀಡಿದ್ದಾರೆ.ಈ ಮೂಲಕ ಯಶ್​ ಸುಮಾರು 1.5 ಕೋಟಿ ರೂ. ಆರ್ಥಿಕ ಸಹಾಯಕ್ಕೆ ಮುಂದಾಗಿದ್ದು, ಅವರ ಈ ಕಾರ್ಯಕ್ಕೆ ಸಿನಿಮಾ ಕ್ಷೇತ್ರ ಸೇರಿ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!