ಬಹಳ ಅಪರೂಪದ ಬಿಳಿ ಹೆಬ್ಬಾವು ಪತ್ತೆ!

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ ಗ್ರಾಮದಲ್ಲಿ ಅಪರೂಪದ ಬಿಳಿ ಹೆಬ್ಬಾವು ಪತ್ತೆಯಾಗಿದೆ.‌

ಸುಬ್ರಹ್ಮಣ್ಯ ನಾಯ್ಕ ಎಂಬವರ ಮನೆಯಲ್ಲಿ ಬಿಳಿ ಹೆಬ್ಬಾವು ಕಾಣಿಸಿಕೊಂಡಿದ್ದು, ಹೆಬ್ಬಾವು ಕಂಡು ಜನ ಆತಂಕಗೊಂಡಿದ್ದರು.

ಕೂಡಲೇ ಉರಗ ತಜ್ಞ ಪವನ್ ನಾಯ್ಕ‌ ಅವರಿಗೆ ಮಾಹಿತಿ ನೀಡಿದ್ದು, ಪವನ್ ನಾಯ್ಕ ಹೆಬ್ಬಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಇದು ಕರ್ನಾಟಕದಲ್ಲಿ ಕಾಣಿಸಿಕೊಂಡಿರುವ ಎರಡನೇ ಬಿಳಿ ಹೆಬ್ಬಾವು ಎಂದು ಹೇಳಲಾಗಿದೆ.

ಮೆಲಾಲಿನ್ ಅಥವಾ ಪಿಗ್ಮೆಂಟ್‌ನ ಕೊರತೆಯಿಂದ ಹೆಬ್ಬಾವಿನ ಚರ್ಮಕ್ಕೆ ಬಣ್ಣ ಬರದೇ ಇರುವ ಕಾರಣ ಬಿಳಿ ಬಣ್ಣ ಹೊಂದಿರುತ್ತದೆ ಎನ್ನಲಾಗಿದೆ.

 
 
 
 
 
 
 
 
 
 
 

Leave a Reply