ವಾಹನ ಸೀಜ್ ಮಾಡಿದ ಬೆನ್ನಲ್ಲೇ ಬಿಟ್ಟು ಕಳಿಸಿದ ಪೋಲಿಸರು – ಯಾಕೆ ಹೀಗಾಯಿತು ಇಲ್ಲಿ ನೋಡಿ

ನೆಲಮಂಗಲ: ಮಂಗಳೂರು-ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಐಷಾರಾಮಿ ಬೈಕ್, ಕಾರುಗಳಲ್ಲಿ ಜಾಲಿ ರೈಡ್ ಗೆಂದು ಬಂದವರಿಗೆ ನೆಲಮಂಗಲ ಪೊಲೀಸರು ಆಶ್ಚರ್ಯ ಮೂಡಿಸಿದ್ದಾರೆ.

ಸೈಲೆನ್ಸರ್ ಮಾರ್ಪಾಡುಗೊಳಿಸಿ ಸೌಂಡ್ ಮಾಡಿಕೊಂಡು ಬರುತ್ತಿದ್ದ 40ಕ್ಕೂ ಹೆಚ್ಚು ಬೈಕ್ ಹಾಗೂ ಕಾರುಗಳನ್ನು ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಟೋಲ್ ಬಳಿ ವಶಕ್ಕೆ ಪಡೆಯಲಾಯಿತು.

ಆದರೆ ಸೀಜ್ ಮಾಡಿದ ಬಹುತೇಕ ವಾಹನಗಳು ಪ್ರಭಾವಿ ಮಕ್ಕಳಿಗೆ ಸೇರಿದ್ದ ಹಿನ್ನೆಲೆ ತಕ್ಷಣವೇ ಮೇಲಾಧಿಕಾರಿಗಳು ಸೀಜ್ ಮಾಡಿರುವ ವಾಹನಗಳನ್ನು ಬಿಟ್ಟು ಕಳುಹಿಸುವಂತೆ ಒತ್ತಡ ಹಾಕಿದ್ದಾರೆ.ಮೇಲಾಧಿಕಾರಿಗಳ ಒತ್ತಡಕ್ಕೆ ಮಣಿದ ಪೋಲಿಸರು ವಾಹನಗಳನ್ನು ಬಿಟ್ಟು ಕಳುಹಿಸಿದ್ದಾರೆ.

 
 
 
 
 
 
 
 
 
 
 

Leave a Reply