ಬೆಂಗಳೂರು : ಮಾಜಿ ಶಿಕ್ಷಣ ಸಚಿವರಿಂದ ವಿದ್ಯಾಪೀಠ ಪ್ರದಕ್ಷಿಣೆ

ಬೆಂಗಳೂರು : 34 ನೇ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಮಾಜಿ ಶಿಕ್ಷಣ ಮಂತ್ರಿಎಸ್ ಸುರೇಶ್ ಕುಮಾರ್ ಪತ್ನಿಯೊಂದಿಗೆ ಬುಧವಾರ ಬೆಂಗಳೂರು ಕತ್ರಿಗುಪ್ಪೆಯ ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ಆಗಮಿಸಿದ್ದರು.

ಈ ವೇಳೆ ಅಲ್ಲಿನ ಶ್ರೀ ಕೃಷ್ಣನ ಗುಡಿ , ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವೃಂದಾವನಗಳನ್ನೂ ಸಂದರ್ಶಿಸಿದ ಸುರೇಶ್ ಕುಮಾರ್ ಬಳಿಕ ವಿದ್ಯಾಪೀಠದೊಳಗೊಂದು ಪ್ರದಕ್ಷಿಣೆ ಬಂದು ಅಲ್ಲಿನ ವಿವಿಧ ತರಗತಿಯ ವಿದ್ಯಾರ್ಥಿಗಳೊಂದಿಗೆ ಸಂತೋಷ ಉತ್ಸಾಹ ಕಾಳಜಿಯಿಂದ ಬೆರೆತರು.ಉಭಯಕುಶಲೋಪರಿ ಮತ್ತು ವಿದ್ಯಾರ್ಥಿಗಳೊಂದಿಗೆ ಆತ್ಮೀಯ ಸಂವಾದವನ್ನೂ ನಡೆಸಿದರು. ಅವರ ಈ ನಡೆ ಮಾಜಿಯಾದರೂ ಶಿಕ್ಷಣದ ಬಗೆಗಿನ ತಮ್ಮ ಕಾಳಜಿ ಕಳಕಳಿ ಸರಳತೆ ಮರೆಯಾಗಿಲ್ಲ ಎಂಬಂತಿತ್ತು.

ಬಳಿಕ ಸ್ವಾಮೀಜಿಯವರನ್ನು ಭೇಟಿ ಮಾಡಿ ಗುರುವಂದನೆ ಸಲ್ಲಿಸಿ ಒಂದಷ್ಟು ಹೊತ್ತು ಸಮಾಲೋಚನೆ ನಡೆಸಿದರು.ಸುರೇಶ್ ಕುಮಾರ್ ದಂಪತಿಗಳಿಗೆ ಶ್ರೀಗಳು ಪ್ರಸಾದ ನೀಡಿ ಆಶೀರ್ವದಿಸಿದರು .

 
 
 
 
 
 
 
 
 
 
 

Leave a Reply