ಕಿಚ್ಚ ಸುದೀಪ ಅವರಿಂದ ವೂಟ್‍ನಲ್ಲಿ ಒಟಿಟಿಯಲ್ಲಿ ಬಿಗ್ ಬಾಸ್ ಮೊದಲ ಆವೃತ್ತಿ ನಡೆಸಿಕೊಡಲು ಸಜ್ಜು

ವಯಾಕಾಂ18ರ ಮುಂಚೂಣಿಯ ಆನ್-ಡಿಮ್ಯಾಂಡ್ ಸ್ಟ್ರೀಮಿಂಗ್ ಪ್ಲಾಟ್‍ಫಾರಂ ವೂಟ್ 8 ಸೀಸನ್‍ಗಳಿಂದ ಅಭೂತಪೂರ್ವ ಯಶಸ್ಸು ಗಳಿಸಿದ ಬಿಗ್ ಬಾಸ್ ಕನ್ನಡದ ಒಟಿಟಿ ಆವೃತ್ತಿಯನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಕನ್ನಡದ ಖ್ಯಾತ ನಟ `ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ ಈ ಕಾರ್ಯಕ್ರಮವನ್ನು ಹೊಚ್ಚಹೊಸ ಉತ್ಸಾಹಕರ ಮಾದರಿಯಲ್ಲಿ ಆಯೋಜಿಸಲಿದೆ.

ಈ ಕಾರ್ಯಕ್ರಮ ಪ್ರಾರಂಭ ಕುರಿತು ಕಿಚ್ಚ ಸುದೀಪ, “ಉತ್ಸಾಹಕರ 8 ಋತುಗಳನ್ನು ಆಯೋಜಿಸಿದ ನಂತರ ಬಿಗ್ ಬಾಸ್ ಕನ್ನಡ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಈ ವರ್ಷ ಮೊಟ್ಟಮೊದಲನೆಯ ಒಟಿಟಿ ಆವೃತ್ತಿಯ ಮೂಲಕ ಮನರಂಜನೆಯಲ್ಲಿ ಕಥೆಗೆ ಟ್ವಿಸ್ಟ್ ತರಲು ಬಹಳ ಸಂತೋಷ ಹೊಂದಿದ್ದೇವೆ. ನಾವು ವೂಟ್‍ನಲ್ಲಿ ಈ ಶೋ ಪ್ರದರ್ಶನಕ್ಕೆ ಸಜ್ಜಾಗಿದ್ದು ನಾನು ವೀಕ್ಷಕರಿಗೆ 24/7 ಲೈವ್ ಆಕ್ಷನ್, ಆಸಕ್ತಿದಾಯಕ ಸಂವಹನಗಳು ಮತ್ತು ಪ್ಲಾಟ್ ಟ್ವಿಸ್ಟ್‍ಗಳನ್ನು ವೀಕ್ಷಕರಿಗೆ ತರಲು ಉತ್ಸುಕನಾಗಿದ್ದೇನೆ, ಇದು ನಮ್ಮ ವೀಕ್ಷಕರನ್ನು ಸೆಳೆಯುತ್ತದೆ ಎಂಬ ಭರವಸೆ ನನ್ನದು” ಎಂದರು.

ಬಿಗ್ ಬಾಸ್ ಕನ್ನಡ ಹಿಂದಿನ ವರ್ಷಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿದೆ. ಈ ಸರಣಿಯಲ್ಲಿ ಆಸಕ್ತಿದಾಯಕ ಅಭ್ಯರ್ಥಿಗಳು ಮತ್ತು ಅವರ ಏರಿಳಿತಗಳನ್ನು ಕಾಣುವುದಲ್ಲದೆ ರಿಯಾಲಿಟಿ ಟಿ.ವಿ. ವಿಭಾಗದಲ್ಲಿ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿಸಿದೆ. ಅನಿಯಮಿತ ನಾಟಕೀಯತೆ ಮತ್ತು ಮನರಂಜನೆ ಹೊಂದಿರುವ ವೂಟ್‍ನ ಒಟಿಟಿಯಲ್ಲಿ ಪ್ರಸಾರವಾಗಲಿರುವ ಇದು ಮನರಂಜನೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಭರವಸೆ ನೀಡುತ್ತದೆ!

ಆಗಸ್ಟ್ ‍ನಲ್ಲಿ ವೂಟ್‍ನಲ್ಲಿ ವಿಶೇಷವಾಗಿ ಒಟಿಟಿ ಆವೃತ್ತಿ ವೀಕ್ಷಿಸಲು ಸಜ್ಜಾಗಿರಿ.

Leave a Reply