ಶಿಕ್ಷಣ, ಯೋಗ ಮತ್ತು ನೃತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ,ಶಿಕ್ಷಕಿಯರಿಗೆ ಸನ್ಮಾನ ಕಾರ್ಯಕ್ರಮ

ಬೆಂಗಳೂರು : ರಾಜರಾಜೇಶ್ವರಿ ನಗರದಲ್ಲಿ ಕರ್ನಾಟಕ ರಾಜ್ಯ ವಿಪ್ರ ಪೋಟೋ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಣ ,ಯೋಗ ಮತ್ತು ನೃತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ,ಶಿಕ್ಷಕಿಯರಿಗೆ ಗೌರವಿಸಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದೀಪಾ ಬೆಳಗಿಸಿ ಕಾರ್ಯಕ್ರಮವನ್ನು ಶ್ರೀ ಯೋಗ ಹಾಗೂ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಬಿ.ಕೆ.ರಮೇಶ್ ಮತ್ತು ಶಿಕ್ಷಕ ವೃಂದದವರು ಉದ್ಘಾಟನೆ ಮಾಡಿದರು.

ಬಿ.ಕೆ.ರಮೇಶ್ ಮಾತನಾಡಿ ಮನೆಯೆ ಮೊದಲ ಪಾಠ ಶಾಲೆ ,ಜೀವನದ ಮೊದಲನೇಯ ಗುರುವಾಗಿ ತಾಯಿ ನಮ್ಮ ಜೀವನ ರೂಪಿಸುತ್ತಾಳೆ .ನಂತರ ಶಾಲೆ ,ಕಾಲೇಜಿನ ಶಿಕ್ಷಕರ ಮಾರ್ಗದರ್ಶನ ಉತ್ತಮ ಪ್ರಜೆಯಾಗಿ ರೂಪಗೊಳ್ಳಲು ನಮ್ಮ ಉತ್ತಮ ಮಾರ್ಗದಲ್ಲಿ ಕರೆದುಕೊಂಡು ಹೋಗುವ ಗುರುವೆ ಸಾಕ್ಷತ್ ಶಿಕ್ಷಕರು, ದೇವರು ಮತ್ತು ಭಕ್ತರ ನಡುವೆ ಗುರುವು ಸೇತುವೆಯಾಗಿ ನಿಲ್ಲುವುದು ಗುರು. ನಮ್ಮ ಪಾಪದ ,ಪುಣ್ಯದ ಕೆಲಸವನ್ನು ದೇವರಿಗೆ ಒಪ್ಪಿಸುತ್ತಾರೆ ಎಂದು ಹಿಂದೂ ಸಂಪ್ರಾದಯದಲ್ಲಿದೆ. ಉಪ ರಾಷ್ಟಪತಿ ,ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಸರ್ವಪಲ್ಲಿ ರಾಧಕೃಷ್ಣರ ಹುಟ್ಟು ಹಬ್ಬವನ್ನು ಶಿಕ್ಷಕರ ದಿನಾಚರಣೆ ಅಚರಿಸುತ್ತಿರುವುದು ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತೆ ಎಂದು ಹೇಳಿದರು.

 
 
 
 
 
 
 
 
 
 
 

Leave a Reply