ಮೈಸೂರು ಡಿಸಿ ರೋಹಿಣಿ ಸಿಂಧೂರಿಗೆ ಅಕ್ಟೋಬರ್ 16 ರವರೆಗೆ ರಿಲೀಫ್   

ಮೈಸೂರು: ಮೈಸೂರು ಡಿಸಿ ರೋಹಿಣಿ ಸಿಂಧೂರಿಗೆ ಮತ್ತೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ರೋಹಿಣಿ ಸಿಂಧೂರಿ ಅವರು ಮತ್ತೆ ಮೈಸೂರು ಡಿಸಿಯಾಗಿ ಮುಂದುವರೆಯಲ್ಲಿ ಇನ್ನೊಂದು ಚಾನ್ಸ್ ಪಡೆದುಕೊಂಡಿದ್ದಾರೆ. ಹೇಗಂತೀರಾ ….

ತಮ್ಮ ವರ್ಗಾವಣೆ ಪ್ರಶ್ನಿಸಿ ನಿರ್ಗಮಿತ ಡಿಸಿ ಶರತ್ ಅವರು ಸಿಎಟಿ ಮೊರೆ ಹೋಗಿದ್ದರು. ಈ ಸಂಬಂಧ ಇಂದು ವಿಚಾರಣೆ ನಡೆಸಿದ ಸಿಎಟಿ ತಾಂತ್ರಿಕ ಕಾರಣಗಳಿಂದ ವಿಚಾರಣೆ ನಡೆಸದೆ ಅಕ್ಟೋಬರ್ 16 ಕ್ಕೆ ವಿಚಾರಣೆ ಮುಂದೂಡಿದೆ.

ಕೊರೊನಾ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕವೇ ಸಿಎಟಿ ವಿಚಾರಣೆಯನ್ನು ಆರಂಭಿಸಿತು. ಆದರೆ ವಿಚಾರಣೆ ವೇಳೆ ತಾಂತ್ರಿಕ ಕಾರಣಗಳಿಂದ ಹೇಳಿಕೆಗಳು ಅಸ್ಪಷ್ಟವಾಗಿ ಕೇಳಿಸಿತು. ಈ ಕಾರಣದಿಂದ ಅಕ್ಟೋಬರ್ 16 ಕ್ಕೆ ವಿಚಾರಣೆ ಮುಂದೂಡಿದ ಸಿಎಟಿ, ಅಂದು ವಾದಿ ಪ್ರತಿ ವಾದಿಗಳ ವಕೀಲರು ನ್ಯಾಯಾಲಯದಲ್ಲಿ ಖದ್ದು ಹಾಜರಿರುವಂತೆ ಸೂಚನೆ ನೀಡಿತು. ಇದರಿಂದ ರೋಹಿಣಿ ಸಿಂಧೂರಿ ಅವರು ಸದ್ಯಕ್ಕೆ ಮೈಸೂರು ಡಿಸಿಯಾಗಿ ಮುಂದುವರೆಯಲಿದ್ದಾರೆ.

 
 
 
 
 
 
 
 
 
 
 

Leave a Reply