Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

“ರಂಗಭೂಮಿ (ರಿ.) ಉಡುಪಿ” 43ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ

ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ “ರಂಗಭೂಮಿ (ರಿ.) ಉಡುಪಿ” ತನ್ನ 57ನೇ ವರ್ಷದಲ್ಲಿ, ಇದೇ ನವಂಬರ್ ತಿಂಗಳ 4ನೇ ವಾರದಲ್ಲಿ ದಿ| ಡಾ| ಟಿ.ಎಂ.ಎ. ಪೈ, ದಿ| ಮಲ್ಪೆ ಮಧ್ವರಾಜ್ ಮತ್ತು ದಿ| ಎಸ್.ಎಲ್. ನಾರಾಯಣ ಭಟ್ ಸ್ಮಾರಕ ರಾಜ್ಯ ಮಟ್ಟದ 43ನೇ ಕನ್ನಡ ನಾಟಕ ಸ್ಪರ್ಧೆಯನ್ನು ಈ ಬಾರಿಯೂ ಕೋವಿಡ್-19 ಸಂಬoಧಿಸಿದ ಸರಕಾರದ ಮಾರ್ಗಸೂಚಿಗೆ ಅನುಗುಣವಾಗಿ ನಡೆಸಲಿದೆ.

ಕರ್ನಾಟಕ ರಾಜ್ಯದ (ಕಾಸರಗೋಡು ಸಹಿತ) ಯಾವುದೇ ಪ್ರದೇಶದ ಹವ್ಯಾಸಿ ನಾಟಕ ತಂಡಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಕನಿಷ್ಟ 1 ಘಂಟೆ 30 ನಿಮಿಷ ಹಾಗೂ ಗರಿಷ್ಟ 2 ಘಂಟೆ 15 ನಿಮಿಷ ಅವಧಿಯ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಜಾನಪದ ಅಥವಾ ಯಾವುದೇ ಪ್ರಕಾರದ ನಾಟಕ ಪ್ರದರ್ಶನ ಮಾಡಬಹುದು.

ಈ ಬಾರಿ ಸ್ಪರ್ಧೆಗೆ ಗರಿಷ್ಠ 12 ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ ಅನುಕ್ರಮವಾಗಿ ರೂ. 35,000/-, ರೂ.25,000/-, ರೂ.15,000/-ದ ನಗದು ಬಹುಮಾನಗಳನ್ನು ಹಾಗೂ ಪರ್ಯಾಯ ಫಲಕಗಳನ್ನು ನೀಡಲಾಗುವುದು. ಅಲ್ಲದೆ ಶ್ರೇಷ್ಠ ನಿರ್ದೇಶನ, ನಟ, ನಟಿ, ಸಂಗೀತ, ಬೆಳಕು, ರಂಗಪರಿಕರ, ಪ್ರಸಾಧನ, ಬಾಲನಟನೆ/ ಹಾಸ್ಯ ಪಾತ್ರಗಳಿಗೆ ನಗದು ಸಹಿತ ಬಹುಮಾನ ನೀಡಲಾಗುವುದು.

ಸ್ಪರ್ಧೆಯಲ್ಲಿ ಅತ್ಯಂತ ಶಿಸ್ತುಬದ್ಧವಾಗಿದ್ದ ತಂಡಕ್ಕೆ ವಿಶೇಷ ಪುರಸ್ಕಾರವಿರುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ಉಚಿತ ಊಟ, ವಸತಿ ಜೊತೆಗೆ ಉಡುಪಿಗೆ ಹೋಗಿ ಬರುವ ಒಟ್ಟು ದೂರಕ್ಕೆ ಕಿ.ಮಿ ಗೆ ರೂ.15/ ರಂತೆ ಕನಿಷ್ಠ ರೂ. 1500/-, ಗರಿಷ್ಠ ರೂ. 15000/- ಪ್ರಯಾಣ ವೆಚ್ಚ ನೀಡಲಾಗುವುದು ಹಾಗೂ ಪ್ರತೀ ತಂಡಕ್ಕೆ ಗೌರವಧನವಾಗಿ ರೂ. 5000/-ವನ್ನು ನೀಡಲಾಗುವುದು.

ತುಂಬಿದ ಪ್ರವೇಶ ಪತ್ರ ಸ್ವೀಕರಿಸಲು ಅಕ್ಟೋಬರ್ 21 ಕೊನೆಯ ದಿನಾಂಕವಾಗಿರುತ್ತದೆ. ಆಸಕ್ತ ತಂಡಗಳು ಪ್ರವೇಶ ಪತ್ರಕ್ಕಾಗಿ ಪ್ರದೀಪ್‌ಚಂದ್ರ ಕುತ್ಪಾಡಿ, ಪ್ರಧಾನ ಕಾರ್ಯದರ್ಶಿ, `ರಂಗಭೂಮಿ&#೩೯;, ಕುತ್ಪಾಡಿ, ಉಡುಪಿ-574118 ಇವರಿಗೆ ಬರೆಯಬೇಕು. ಮೊಬೈಲ್ ಸಂಖ್ಯೆ : 9448652847(ಪ್ರದೀಪ್‌ಚಂದ್ರ ಕುತ್ಪಾಡಿ) ಅಥವಾ ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು (9844742166) ಅಥವಾ ಜತೆ ಕಾರ್ಯದರ್ಶಿಗಳಾದ ಶ್ರೀಪಾದ ಹೆಗಡೆ (9845111449) ಹಾಗೂ ವಿವೇಕಾನಂದ ಎನ್. (944936765) ಇವರನ್ನು ಸಂಪರ್ಕಿಸಬಹುದು. ಹಾಗೆಯೇ ಸ್ಪರ್ಧೆ ನಡೆಯುವ ಸಮಯದಲ್ಲಿ ಸರಕಾರದ ಕೋವಿಡ್ 19ರ ಮಾರ್ಗಸೂಚಿ/ನಿಬಂಧನೆ ಬದಲಾದಲ್ಲಿ ನಮ್ಮ ಸಂಸ್ಥೆಯು ಅದಕ್ಕೆ ಬದ್ಧವಾಗಿರುತ್ತದೆ ಎಂದು “ರಂಗಭೂಮಿ” ಪ್ರಕಟಣೆ ತಿಳಿಸಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!