ಲಾಕ್​ಡೌನ್​ ವಿಸ್ತರಣೆ ಒಳಿತು, ಸಿಎಂಗೆ ಈ ಬಗ್ಗೆ ಮನವರಿಕೆ ಮಾಡ್ತೀವಿ ಎಂದ ಸಚಿವ ಆರ್​.ಅಶೋಕ್

ಬೆಂಗಳೂರು: ರಾಜ್ಯದಲ್ಲಿ ಲಾಕ್​ಡೌನ್​ ಘೋಷಣೆಯಾದ ಬಳಿಕ ಕೊರೋನಾ ಪ್ರಕರಣಗಳಲ್ಲಿ ಇಳಿಕೆಯಾಗಿದೆ. ಹೀಗಾಗಿ ಲಾಕ್​ಡೌನ್​ ವಿಸ್ತರಣೆ ಮಾಡುವುದು ಅಥವಾ ಮುಂದುವರೆಸುವುದು ಒಳಿತು ಎಂದು ಕಂದಾಯ ಸಚಿವ ಆರ್​.ಅಶೋಕ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್​ಡೌನ್​ ವಿಸ್ತರಣೆ ಮಾಡುವ ಬಗ್ಗೆ ಮನಸ್ಸು ಮಾಡಿದಂತೆ ಕಂಡು ಬಂದಿದೆ. ಜೊತೆಗೆ ಈ ಬಗ್ಗೆ ಸಿಎಂ ಬಿಎಸ್​ ಯಡಿಯೂರಪ್ಪನವರಿಗೆ ಮನವರಿಕೆ ಮಾಡುವುದಾಗಿ ತಿಳಿಸಿದ್ದಾರೆ.

ಲಾಕ್ ಡೌನ್ ಮುಂದುವರೆಸಿದ್ರೆ ಅನುಕೂಲವಾಗುತ್ತೆ, ಈಗ ಕೇಸ್ ಕಡಿಮೆ ಆಗ್ತಿದೆ. ಇದೇ ಸಂದರ್ಭದಲ್ಲಿ ಲಾಕ್ ಡೌನ್ ಮುಂದುವರೆಸಿದ್ರೆ ಮತ್ತಷ್ಟು ಅನುಕೂಲವಾಗುತ್ತದೆ. ಸಿಎಂ ಯಡಿಯೂರಪ್ಪರವರಿಗೂ ಈ ಬಗ್ಗೆ ಮನವರಿಕೆ ಮಾಡ್ತೀವಿ. ನಾನು ಬೆಂಗಳೂರಿನ ನಾಗರೀಕನಾಗಿ ಲಾಕ್​​ಡೌನ್ ಮುಂದುವರಿಸಬೇಕು ಅಂತ ಹೇಳ್ತೀನಿ. ಲಾಕ್​​ಡೌನ್ ಬೇಕು ಅಂತ ನಾವು ಸಿಎಂಗೆ ಸಲಹೆ ನೀಡ್ತೀವಿ ಎಂದು ಸಚಿವರು ಹೇಳಿದ್ದಾರೆ.

ನಮ್ಮ ರಾಜ್ಯಕ್ಕಿಂತ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರ, ದೆಹಲಿ ರಾಜ್ಯಗಳಲ್ಲಿವೆ. ಅಲ್ಲಿ ಮೊದಲ ಅಲೆ ಬಂತು. ಅವರು ಲಾಕ್​​ಡೌನ್ ವಿಸ್ತರಣೆ ಮಾಡಿದ್ರು. ಅದನ್ನ ನಾವು ಅನುಸರಿಸುತ್ತೇವೆ. ಸಿಎಂ ಈಗಿರುವ ಲಾಕ್ ಡೌನ್ ಮುಗಿಯುವ ಮುಂಚೆ 3-4 ದಿನಗಳಲ್ಲಿ ಸಭೆ ಮಾಡ್ತಾರೆ. ಆ ಸಭೆಯಲ್ಲಿ ಈ ಬಗ್ಗೆ ಸಲಹೆ ಕೊಡ್ತೀವಿ. ಸಿಎಂ ಅಂತಿಮವಾಗಿ ಲಾಕ್ ಡೌನ್ ಮುಂದುವರೆಸುವ ಬಗ್ಗೆ ನಿರ್ಧಾರ ಮಾಡ್ತಾರೆ ಎಂದು ಹೇಳಿದ್ದಾರೆ.

 

 
 
 
 
 
 
 
 
 
 
 

Leave a Reply