ತಾನು ಪ್ರೆಸ್ ಎಂದು ತಿರುಗಾಡಿತ್ತಿದ್ದ ನಕಲಿ ಪತ್ರಕರ್ತ: ಬೈಕ್ ಸೀಜ್ ಮಾಡಿದ‌ ಪೊಲೀಸರು

ಗದಗ : ತಾನು ಪ್ರೆಸ್ ಎಂದು ಹೇಳಿಕೊಂಡು ಊರೆಲ್ಲ ಸುತ್ತಾಡುತ್ತಿದ್ದ ನಕಲಿ ಪತ್ರಕರ್ತನ ಬೈಕ್ ನ್ನು ಪೊಲೀಸರು ಸೀಜ್ ಮಾಡಿರುವ ಘಟನೆ ಗದಗದಲ್ಲಿ ನಡೆದಿದೆ.ಲಾಕ್ ಡೌನ್ ಹಿನ್ನೆಲೆ ಅನಾವಶ್ಯಕವಾಗಿ ಓಡಾಡುತ್ತಿರುವವರ ಬೈಕ್ ಸೀಜ್ ಮಾಡುವಂತೆ ಸರ್ಕಾರ ಸೂಚಿಸಿದೆ.ಹೀಗೆ ಬೇಕಾಬಿಟ್ಟಿ ತಿರುಗಾಡುತ್ತಿದ್ದ ನಕಲಿ ಪತ್ರಕರ್ತನಿಗೆ ಪೊಲೀಸರು ಸರಿಯಾದ ಪಾಠ ಕಲಿಸಿದ್ದಾರೆ.

ನಗರದ ವಿವಿಧ ಬಡಾವಣೆಗಳಲ್ಲಿ ಇಂದು ಕೂಡ ಪೊಲೀಸರು ಅನಾವಶ್ಯಕವಾಗಿ ಓಡಾಡುತ್ತಿರುವವರ ಬೈಕ್ ಸೀಜ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ರೋಡಿಗೆ ಬಂದಿದ್ದ ವ್ಯಕ್ತಿಯೊಬ್ಬ ಪ್ರೆಸ್ ಎಂದು ಸುಳ್ಳು ಹೇಳಿ ಪೋಲಿಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಪಂಚಾಕ್ಷರಿ ನಗರದ ರಸ್ತೆಯ ಹತ್ತಿರ ತಾನು ಪ್ರೆಸ್ ಎಂದು ಹೇಳಿಕೊಂಡಿದ್ದ ವ್ಯಕ್ತಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.ಆಗ ಡಿವೈಎಸ್ ಪಿ ವಿಜಯ್ ಬಿರಾದಾರ ಐಡಿ ಕಾರ್ಡ್ ತೋರಿಸು ಎಂದು ಕೇಳಿದ್ದಾರೆ. ಆಗ ವಾಕ್ ಹೋಗಿದ್ದೆ, ಪ್ರೆಸ್ ಎಂದು ಏನೇನೊ ಹೇಳಿ ಯುವಕ ಸಿಕ್ಕಿ ಬಿದ್ದಿದ್ದು,ಪೊಲೀಸರು ಮುಲಾಜಿಲ್ಲದೆ, ಆತನ ಬೈಕ್ ಸೀಜ್ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply