ಪದವೀಧರರಿಗೆ NHAI ನಲ್ಲಿ ಉದ್ಯೋಗ..

ಎನ್ಎಚ್ಎಐ (ನ್ಯಾಷನಲ್​ ಹೈವೇಸ್​ ಅಥಾರಿಟಿ ಆಫ್​ ಇಂಡಿಯಾ ) ಸಿವಿಲ್​ ಇಂಜಿನಿಯರಿಂಗ್​ ಪದವೀಧರರಿಗೆ ಉದ್ಯೋಗಾವಕಾಶ ನೀಡಲು ಮುಂದಾಗಿದೆ.ಗೇಟ್​ ಪರೀಕ್ಷೆ 2021ರ ಅಂಕಗಳ ಆಧಾರದ‌‌ ಮೇಲೆ ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿದೆ.

41 ಡೆಪ್ಯುಟಿ ಮ್ಯಾನೇಜರ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ‌. 

ಹುದ್ದೆಯ ವಿವರ : ಡೆಪ್ಯುಟಿ ಮ್ಯಾನೇಜರ್​ (ಟೆಕ್ನಿಕಲ್​) 41

ಶೈಕ್ಷಣಿಕ ಅರ್ಹತೆ : ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಪದವಿ ಹೊಂದಿರಬೇಕು. 2021ರ ಗೇಟ್​ ಪರೀಕ್ಷೆಯ ಅಂಕ ಆಧರಿಸಿ ಆಯ್ಕೆ ಮಾಡಲಾಗುವುದು.ಅಂತಿಮ ವರ್ಷ/ ಸೆಮಿಸ್ಟರ್​ನಲ್ಲಿ ಅಧ್ಯಯನ ಮಾಡುತ್ತಿದ್ದು, ಕೋವಿಡ್​ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟವಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ : ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದ ಅನ್ವಯ ವಯೋ ಸಡಿಲಿಕೆ ನೀಡಲಾಗುವುದು.

ಮೀಸಲಾತಿ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ಸ್ಥಾನ, ಎಸ್ಸಿಗೆ 6, ಎಸ್ಟಿಗೆ 4, ಇತರ ಹಿಂದುಳಿದ ವರ್ಗಕ್ಕೆ 10, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 3 ಸ್ಥಾನಗಳನ್ನು ಮೀಸಲಿರಿಸಲಾಗಿದೆ.ಇದರಲ್ಲಿ 2 ಸ್ಥಾನಗಳನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಹಾಗೂ 2021ರ ಗೇಟ್​ ಪರೀಕ್ಷೆಯಲ್ಲಿ ಪಡೆದ ಅಂಕ ಆಧರಿಸಿ ಶಾರ್ಟ್ ​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 28-5-2021

ಅಭ್ಯರ್ಥಿಗಳು ಆನ್​ಲೈನ್​ನಲ್ಲಿ ಮಾತ್ರವೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಅರ್ಜಿಯ ಪ್ರತಿಯೊಂದನ್ನು ತಮ್ಮ ಬಳಿ ಇರಿಸಿ ಕೊಳ್ಳುವಂತೆ ಸೂಚಿಸಲಾಗಿದೆ. ಅಂಗವಿಕಲ ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳು ಇತ್ತೀಚಿನ ಅಂಗವಿಕಲ ಪ್ರಮಾಣಪತ್ರ ಸಲ್ಲಿಸಬೇಕು. ಶೇ. 40ಕ್ಕಿಂತ ಹೆಚ್ಚು ಅಂಗವಿಕಲತೆಯನ್ನು ಹೊಂದಿರಬಾರದು.

ಹೆಚ್ಚಿನ ಮಾಹಿತಿಗಾಗಿ https://nhai.gov.in ಅಧಿಕೃತ ವೆಬ್ ಸೈಟ್ ಸಂಪರ್ಕಿಸಿ

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ : https://bit.ly/2QVRvdKಸಿಗಲಿದೆ

 
 
 
 
 
 
 
 
 
 
 

Leave a Reply