ಮೆಗಾವ್ಯಾಟ್ ಉತ್ಪಾದನೆಯ ಸೋಲಾರ್ ಪಾರ್ಕ್ ಗೆ ಸಚಿವ ವಿ.ಸುನೀಲ್ ಕುಮಾರ್ ಭೇಟಿ

ತುಮಕೂರು : ‘ದೇಶದ ಅತಿದೊಡ್ಡ ಸೋಲಾರ್ ಪಾರ್ಕ್’ ಎಂದು ಹೆಸರಾದ ತುಮಕೂರು ಜಿಲ್ಲೆಯ ಪಾವಗಡದ ನಾಗಲಮಡಿಕೆಯ 12 ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ 2050 ಮೆಗಾವ್ಯಾಟ್ ಉತ್ಪಾದನೆಯ ಸೋಲಾರ್ ಪಾರ್ಕ್ ಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಭೇಟಿ ನೀಡಿದರು‌.

ಬಳಿಕ ಸ್ಥಳೀಯ ರೈತರೊಂದಿಗೆ ಸಭೆ ಹಾಗೂ ಅಹವಾಲು ಸ್ವೀಕರಿಸಿ, ಅಧಿಕಾರಿಗಳೊಂದಿಗೆ ವಿಸ್ತೃತ ಸಭೆ ನಡೆಸಿದರು. ಸ್ಥಳೀಯರಿಗೆ ಉದ್ಯೋಗ ನೀಡಲು ಅಧಿಕಾರಿಗಳಿಗೆ ಸೂಚೀಸಿ ಸ್ಥಳೀಯ ಪ್ರದೇಶದ ಗ್ರಾಮಗಳಿಗೆ ಸೋಲಾರ್ ದಾರಿದೀಪ ಅಳವಡಿಸಲು ನಿರ್ದೇಶಿಸಿದರು.

 
 
 
 
 
 
 
 
 
 
 

Leave a Reply