ಬೆಂಗಳೂರಿನಲ್ಲಿ ಮಾಸ್ಕ್ ವಿತರಿಸಿ ಮಾದರಿಯಾದ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್

ಬೆಂಗಳೂರು: ಮಾಸ್ಕ್ ಧರಿಸದಿದ್ದರೆ ಪೋಲಿಸರು ಸದಾ ಲಾಠಿ ರುಚಿ ತೋರಿಸುತ್ತಾರೆ, ದಂಡ ಹಾಕುತ್ತಾರೆ ಎನ್ನುವ ಜನರಿಗೆ ಇಲ್ಲಿ ಓರ್ವ ಪೋಲಿಸ್ ಅಧಿಕಾರಿ ಮಾಸ್ಕ್ ವಿತರಿಸಿ ಮಾದರಿಯಾಗಿದ್ದಾರೆ.

ಪ್ರಸ್ತುತ ರೇಲ್ವೈ ಇಲಾಖೆಯ ಎಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಭಾಸ್ಕರ್ ರಾವ್ ಮಂಜಾನೆ ಕೆ.ಆರ್.ಮಾರುಕಟ್ಟೆಗೆ ಧಾವಿಸಿದ್ದಾರೆ. ಕೆ.ಆರ್.ಮಾರುಕಟ್ಟೆಯ ವ್ಯಾಪಾರಸ್ಥರಿಗೆ, ಜನರಿಗೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಕುರಿತು ತಿಳಿ ಹೇಳಿದ್ದಾರೆ.

ಈ ವೇಳೆ ಸಾವಿರಾರು ಮಾಸ್ಕ್ ಗಳನ್ನು ಜನರಿಗೆ ಉಚಿತವಾಗಿ ವಿತರಿಸಿ ಬಡ ವ್ಯಾಪಾರಸ್ಥರಿಗೆ ನೆರವಾಗಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಭಾಸ್ಕರ್ ರಾವ್ , ಇದೊಂದು ಸಂಕಷ್ಟದ ಸ್ಥಿತಿ. ಈ ಹೊತ್ತಿನಲ್ಲಿ ಫೇಕ್ ವಿಡಿಯೋ ಫಾರ್ವಡ್ ಮಾಡಿಕೊಂಡು, ಜನರಲ್ಲಿ ಆತಂಕ ಹುಟ್ಟಿಸಿ ಬದುಕುವ ಬದಲು ಪಾಸಿಟಿವ್ ಆಗಿರಿ.ಧನಾತ್ಮಕ ಚಿಂತನೆಗಳನ್ನು ಹಂಚಿಕೊಳ್ಳಿ. ನಾನು ಅಷ್ಟೇ ನನಗಿರುವ ಅವಕಾಶದಲ್ಲಿ ಜನಸಾಮಾನ್ಯರಿಗೆ ನೆರವು ನೀಡುವ ಉದ್ದೇಶದಿಂದ ಕೆ.ಆರ್.ಮಾರುಕಟ್ಟೆಗೆ ಬಂದಿದ್ದೇನೆ. ಇಲ್ಲಿನ ಜನರಿಗೆ ಮಾಸ್ಕ್ ವಿತರಿಸಿ ಅವರಿಗೊಂದಿಷ್ಟು ತಿಳುವಳಿಕೆ, ಮುಂಜಾಗ್ರತೆ ಮೂಡಿಸಿದರೇ ಕೊರೋನಾ ನಿಯಂತ್ರಣಕ್ಕೆ ಸಹಾಯವಾಗಲಿದೆ.ಹೀಗಾಗಿ ನನ್ನಿಂದಾದ ಕೆಲಸವನ್ನು ನಾನು ಮಾಡಿದ್ದೇನೆ. ಯಾರೂ ಕೊರೋನಾಗೆ ಹೆದರುವ ಅಗತ್ಯವಿಲ್ಲ. ಬದಲಾಗಿ ಮುಂಜಾಗ್ರತೆ ವಹಿಸಿ ಆರೋಗ್ಯವಾಗಿರಿ. ಧನಾತ್ಮಕ ವಿಚಾರಗಳಿರಲಿ ಎಂದು ಮನವಿ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply