Janardhan Kodavoor/ Team KaravaliXpress
26.6 C
Udupi
Monday, June 27, 2022
Sathyanatha Stores Brahmavara

ಕರ್ನಾಟಕದ ದಕ್ಷ ಐಪಿಎಸ್‌ ಅಧಿಕಾರಿ ದಿ. ಡಾ.ಕೆ. ಮಧುಕರ್‌ ಶೆಟ್ಟಿಗೆ ಸಂದ ವಿಶೇಷ ಗೌರವ

ಹೈದರಾಬಾದ್‌: ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯ ಹಾಲ್‌ ನಂ. 106ಕ್ಕೆ ಕರ್ನಾಟಕದ ಐಪಿಎಸ್‌ ಅಧಿಕಾರಿ ದಿವಂಗತ ಡಾ.ಕೆ. ಮಧುಕರ್‌ ಶೆಟ್ಟಿ ಅವರ ಹೆಸರಿಟ್ಟು ಗೌರವ ಸೂಚಿಸಲು ನಿರ್ಧರಿಸಲಾಗಿದೆ ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ. ​​

ಮಧುಕರ್ ಅವರ ಸೇವಾ ಮನೋಭಾವ, ವೃತ್ತಿಪರತೆ ಹಾಗೂ ಬದ್ಧತೆಗೆ ಈ ಮೂಲಕ ಗೌರವ ಸೂಚಿಸಲಾಗಿದೆ. ಐಪಿಎಸ್‌ ಪ್ರೊಬೆಷನರಿಗಳಿಗೆ ಅವರು ಸ್ಫೂರ್ತಿಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಉಡುಪಿ ಮೂಲದ ಶೆಟ್ಟಿ ಅವರು 1999ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ.ಬೆಂಗಳೂರು ಗ್ರಾಮಾಂತರ,ಚಾಮರಾಜನಗರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎಸ್‌ಪಿಯಾಗಿ ಕೆಲಸ ಮಾಡಿದ್ದರು.

ಕೆಲ ಕಾಲ ಐಜಿಪಿಯಾಗಿ, ಪೊಲೀಸ್‌ ನೇಮಕಾತಿ ವಿಭಾಗದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ 2018ರಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಡಿ.25ರಂದು ಹೈದರಾಬಾದ್‌ನ ಕಾಂಟಿನೆಂಟಲ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!