Janardhan Kodavoor/ Team KaravaliXpress
25.6 C
Udupi
Monday, June 27, 2022
Sathyanatha Stores Brahmavara

ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ವಿಸ್ತರಣೆ – ಸಿಎಂ ಯಡಿಯೂರಪ್ಪ

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ವಿಸ್ತರಣೆ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಡಾಲರ್ಸ್ ಕಾಲೋನಿಯ ಧವಳಗಿರಿಯ ಮನೆ ನವೀಕರಣ ಹಿನ್ನೆಲೆ ಇಂದು ಮನೆ ನೋಡಲು ಸಿಎಂ ಆಗಮಿಸಿದ ವೇಳೆ ಮಾಧ್ಯಮಗಳು ಲಾಕ್‍ಡೌನ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಕೊರೊನಾ ನಿಯಂತ್ರಣವಾಗದ ಹಿನ್ನೆಲೆಯಲ್ಲಿ ಜೂನ್ 7 ರ ನಂತರವೂ ಲಾಕ್‍ಡೌನ್ ವಿಸ್ತರಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ರಫ್ತು ಆಧಾರಿತ ಸೇವೆ ನಾಳೆಯಿಂದ ಆರಂಭವಾಗಲಿದ್ದು ಲಾಕ್ ಡೌನ್ ಸಡಿಲ ಹೇಗೆ ಮಾಡಬೇಕು ಎನ್ನುವುದರ ಬಗ್ಗೆಯೂ ಚರ್ಚೆ ಮಾಡುತ್ತೇವೆ. ವಿಸ್ತರಣೆ ಮಾಡಿ ಬಿಗಿ ಕ್ರಮ ತೆಗೆದುಕೊಂಡು ನಂತರ ಹೇಗೆ ಹೋಗಬೇಕು ಎಂಬುದರ ಬಗ್ಗೆ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ.ಹಳ್ಳಿಗಳಲ್ಲಿ ಇನ್ನೂ ಕೊರೊನಾ ಕಡಿಮೆ ಆಗಿಲ್ಲ. ಯಾವ ವಲಯಕ್ಕೆ ಅನುಮತಿ ನೀಡಬೇಕು ಎನ್ನುವುದರ ಬಗ್ಗೆ ಇಂದು ಸಂಜೆ ನಿರ್ಧಾರ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಆದರೆ ಲಾಕ್‍ಡೌನ್ ಎಷ್ಟು ದಿನ ವಿಸ್ತರಣೆಯಾಗಲಿದೆ ಇನ್ನಷ್ಟೇ ತಿಳಿದು ಬರಬೇಕಿದೆ.ಇಂದು ಸಂಜೆ ನಡೆಯುವ ಸಭೆಯ ನಂತರ, ಸಂಜೆ 6 ಗಂಟೆಗೆ ಹೊಸ ಮಾರ್ಗಸೂಚಿ ಪ್ರಕಟವಾಗಲಿದೆ. ಹಲವು ಸಡಿಲಿಕೆಗಳು ಹೊಸ ಮಾರ್ಗಸೂಚಿಯಲ್ಲಿ ಇರಲಿದೆ.ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ದೊರಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!