ಕರೊನಾ  ಹೊಡೆತಕ್ಕೆ ತತ್ತರಿಸಿದ ಸಿಎಂ ನಿವಾಸ 

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪಗೆ ಕರೊನಾ ಪಾಸಿಟಿವ್​ ಬಂದ ಬೆನ್ನಲ್ಲೇ ಅವರ ನಿವಾಸದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕ ಮನೆ ಮಾಡಿದೆ. ಸಿಎಂಗೆ ಸೋಂಕು ಇರುವುದು ಗೊತ್ತಾಗುತ್ತಿದ್ದಂತೆ ಅವರ ಪುತ್ರಿ ಪದ್ಮಾವತಿಗೂ ಕರೊನಾ ಖಚಿತವಾಗಿದ್ದು, ಅವರಿಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಿಎಂ ಪುತ್ರ ವಿಜಯೇಂದ್ರಗೆ ವರದಿ ನೆಗೆಟಿವ್ ಬಂದಿದೆ ಯಾದರೂ ಸದ್ಯ ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮತ್ತೆ 6 ಸಿಬ್ಬಂದಿಗೆ ಪಾಸಿಟಿವ್ ಬಂದಿದ್ದು, ಒಟ್ಟಾರೆ ಸಿಎಂ ನಿವಾಸಗಳ 11 ಮಂದಿಗೆ ಸೋಂಕು ದೃಢ ಪಟ್ಟಿದೆ ಎಂಬ ಮಾಹಿತಿ ಗೊತ್ತಾಗಿದೆ. 

ಮೂರು ದಿನಗಳ ಹಿಂದಷ್ಟೇ ರಾಜ್ಯಪಾಲರನ್ನು ಸಿಎಂ ಭೇಟಿ ಮಾಡಿದ್ದರು. ಇದೀಗ ರಾಜಭವನದ ಸಿಬ್ಬಂದಿಯಲ್ಲೂ ಆತಂಕ ಮನೆ ಮಾಡಿದೆ. ಅಲ್ಲದೆ ಸಿಎಂ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಯಿ ಸೆಲ್ಫ್ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

ಜು.30ರಂದು ಶಿವಾಜಿನಗರದಲ್ಲಿ ಮೆಟ್ರೋ ಸುರಂಗ ಕಾಮಗಾರಿಗೆ ಸಿಎಂ ಚಾಲನೆ ನೀಡಿದ ಸಂದರ್ಭ ಕೆಲ ಸಚಿವರೂ ಉಪ ಸ್ಥಿತರಿದ್ದರು.  ಅವರೆಲ್ಲರಿಗೂ ಕರೊನಾ ಭೀತಿ ಆವರಿಸಿದೆ. ಈಗಾಗಲೇ ಸಿಎಂ ಕುಟುಂಬ ಕ್ವಾರಂಟೈನ್​ಗೆ ಒಳಪಟ್ಟಿದ್ದು, ಸಿಎಂ ನಿವಾಸ ಕಾವೇರಿ-ಕೃಷ್ಣಾದಲ್ಲಿ ಎಲ್ಲ ಸಿಬ್ಬಂದಿಗೂ ತಪಾಸಣೆ ಮಾಡಲಾಗುತ್ತಿದೆ.

Leave a Reply