ವಿಶ್ವ ವಿಖ್ಯಾತ ಜೋಗ ಜಲಪಾತ ನಾಳೆಯಿಂದ ಪ್ರವಾಸಿಗರ ವೀಕ್ಷಣೆಗೆ ಓಪನ್

ಶಿವಮೊಗ್ಗ : ವಿಶ್ವವಿಖ್ಯಾತ ಜೋಗ ಜಲಪಾತವನ್ನು ವೀಕ್ಷಿಸಲು ವೀಕ್ಷಕರಿಗೆ ನಾಳೆಯಿಂದ ಅವಕಾಶ ನೀಡಲಾಗುತ್ತಿದೆ.ಕೊರೋನಾ ಸೋಂಕಿನ ಲಾಕ್ ಡೌನ್ ನಂತರದಲ್ಲಿ ಬಂದ್ ಆಗಿದ್ದಂತ ಜೋಗದ ಸೊಬಗಿನ ವೀಕ್ಷಣೆ, ವೀಕ್ಷಕರಿಗಾಗಿ ತೆರೆದುಕೊಳ್ಳಲಿದೆ. 

ಜೋಗವನ್ನು ವೀಕ್ಷಿಸಲು ಆಗಮಿಸುವ ಪ್ರವಾಸಿಗರು ಕೆಲ ನಿಯಮಗಳನ್ನು ಪಾಲಿಸುವುದು ಮಾತ್ರ ಕಡ್ಡಾಯವಾಗಿದೆ.ಈ ಕುರಿತಂತೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ರಾಮಕೃಷ್ಣ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಕೊರೋನಾ ಸೋಂಕಿನ ಹೆಚ್ಚಳದಿಂದಾಗಿ ಬಂದ್ ಆಗಿದ್ದಂತ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಜೋಗದ ಜಲಪಾತ ವೀಕ್ಷಿಸಲು, ನಾಳೆಯಿಂದ ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತಿದೆ. ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜಲಪಾತವನ್ನು ವೀಕ್ಷಿಸಬಹುದಾಗಿದೆ ಎಂದಿದ್ದಾರೆ.

ಕೋವಿಡ್ ಸೋಂಕಿನ ಭೀತಿಯ ನಡುವೆಯೂ ನಾಳೆಯಿಂದ ವೀಕ್ಷಕರಿಗಾಗಿ ಜೋಗದ ಸೊಬಗನ್ನು ಸವಿಯಲು ಅನುಮತಿಸಿರುವ ಕಾರಣ, ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಆಗಮಿಸಬೇಕು. ಜೊತೆಗೆ ವೀಕ್ಷಣೆಯ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಬೇಕೊಂಡು ಸ್ವಚ್ಛತಾ ನಿಯಮಗಳನ್ನೂ ಪಾಲಿಸುವುದು ಕಡ್ಡಾಯವಾಗಿದೆ.

 
 
 
 
 
 
 
 
 

Leave a Reply