ಕೊರೋನಾ ಸಂಕಷ್ಟ ಸಮಯದಲ್ಲಿ ಅಶಕ್ತರಿಗೆ ನೆರವಾದ ಹಾಂಗ್ಯೊ  

ಮಂಗಳೂರು: ಕೊರೋನಾ ಮಹಾಮಾರಿ ದೇಶವನ್ನೇ ತಲ್ಲಣಕ್ಕೀಡು ಮಾಡಿರುವಾಗ ಹಾಂಗ್ಯೊ ಕಂಪನಿಯು ಸಮಾಜದ ಅಶಕ್ತ ಮತ್ತು ಅಸಹಾಯಕರ ನೆರವಿಗೆ ಧಾವಿಸಿದೆ.ಹಾಂಗ್ಯೊ ತನ್ನ ಮಾನವೀಯ ಸಾಮಾಜಿಕ ಜವಾಬ್ದಾರಿ ಉಪಕ್ರಮದ ಭಾಗವಾಗಿ ಅಶಕ್ತ, ನಿರ್ಗತಿಕರಿಗೆ ಊಟ ನೀಡುವುದಕ್ಕೆ ಮುಂದಾಗಿದೆ. 

ಗ್ರಾಹಕರು ಹಾಂಗ್ಯೊದ https://shop.hangyo.in ಮೂಲಕ ಪೂರ್ವನಿರ್ಧರಿತ ಪ್ರಮಾಣದ ಉತ್ಪನ್ನಗಳನ್ನು ಖರೀದಿ ಮಾಡಿದರೆ ಅದರಲ್ಲಿ ಒಂದಷ್ಟು ಮೊತ್ತವನ್ನು ಅಶಕ್ತ ಮತ್ತು ಅಸಹಾಯಕರಿಗೆ ನೀಡುವ ಊಟಕ್ಕೆ ನೀಡಲಾಗುವುದು. ಮಂಗಳೂರಿನ ಯೂತ್‌ ಆಫ್‌ ಜಿಎಸ್‌ಬಿ ಮತ್ತು ಕಾಸ್‌ ಸಂಘಟನೆಗಳು ಈ ಪ್ರಯತ್ನಕ್ಕೆ ಸಹಕಾರ ನೀಡುತ್ತಿವೆ. 

ಕರೊನಾದಿಂದ ಇಡೀ ವಿಶ್ವವನ್ನೇ ಅಲ್ಲೋಲ ಕಲ್ಲೋಲಗೊಳಿಸುತ್ತಿದ್ದು, ಕರೊನಾದಿಂದ ಭೂಮಿ ತಾಯಿ ಕಂಗೆಟ್ಟಿದ್ದಾಳೆ. ಕೋವಿಡ್ ಎರಡನೇ ಅಲೆಯೂ ಇದುವರೆಗೆ ಕಂಡು ಕೇಳಿರದ ರೀತಿಯಲ್ಲಿ ಭಾರತವನ್ನು ಅಪ್ಪಳಿಸಿದೆ. ಈ ಹಿನ್ನೆಲೆಯಲ್ಲಿ ಹಾಂಗ್ಯೊದಿಂದ ಪಡೆದುಕೊಳ್ಳುವ ಉತ್ಪನ್ನಗಳು ಈ ಮೂಲಕ ಸಮಾಜದ ಅಶಕ್ತರ ಮತ್ತು ಅಸಹಾಯಕರ ನೆರವಾಗಲಿವೆ. ಅವರ ಮುಖದಲ್ಲಿ ಸಂತಸ ತರುವುದು ಇದರ ಉದ್ದೇಶ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಜಿ.ಪೈ ತಿಳಿಸಿದ್ದಾರೆ

 
 
 
 
 
 
 
 
 

Leave a Reply