ಬೆಂಗಳೂರು: ತಂದೆಯೊಬ್ಬರು ತನ್ನ ಏಕೈಕ ಪುತ್ರನ ಮದುವೆ ವಿಡಿಯೋಗಳನ್ನು ಕಳೆದುಕೊಂಡಿರುವುದರ ಕುರಿತು ಸಿಟ್ಟಾದ ಬೆಂಗಳೂರಿನ ಛಾಯಾಚಿತ್ರಗಾಹಕನ ವಿರುದ್ಧ ದೂರು ದಾಖಲಿಸಿದ್ದಾರೆ.
ದೂರಿನೊಂದಿಗೆ 55 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ನ್ಯಾಯಾಲಯ ಛಾಯಾಗ್ರಾಹಕನಿಗೆ ಆದೇಶಿಸಿದೆ.ಈ ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರು ಗ್ರಾಮಾಂತರ ಮತ್ತು ನಗರ ಒಂದನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಮತ್ತಿಕೆರೆಯ ಗೋಕುಲ ಎಕ್ಸ್ ಟೆನ್ಷನ್ ನ 59 ವರ್ಷದ ದತ್ತಾತ್ರೇಯ ಭಟ್ ಅವರು ಎನ್ ಜೆಪಿ ಲೇಔಟ್ ನ ಪಿಕ್ಸ್ ಬ್ರಿಕ್ಸ್ ಸಂಸ್ಥೆಯ ಗುರು ಚೇತನ್ ವಿರುದ್ಧ ದೂರು ನೀಡಿದ್ದರು.
2019ರಲ್ಲಿ ತಮ್ಮ ಮಗನ ಮದುವೆಗಾಗಿ ವೃತ್ತಿಪರ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಏಜೆನ್ಸಿ ನಡೆಸುತ್ತಿರುವ ಚೇತನ್ ಅವರನ್ನು ದತ್ತಾತ್ರೇಯ ಭಟ್ ಅವರು ಏಪ್ರಿಲ್ 26, 27 ಮತ್ತು 28ರಂದು ವಿಡಿಯೋ ಕವರೇಜ್ ಮಾಡಲು ಸಂಪರ್ಕಿಸಿದ್ದರು.ಒಂದು ಒಪ್ಪಂದಕ್ಕೆ ಸಹಿ ಹಾಕಿದ್ದು, ದೇವರ ಕಾರ್ಯ, ಹಲ್ದಿ, ಕಾಶಿಯಾತ್ರೆ, ಸಂಗೀತ, ರಿಸೆಪ್ಷನ್, ಮುಹೂರ್ತ ಮತ್ತು ವಧು ಪ್ರವೇಶ- ಸ್ಟಿಲ್ ಗಳು ಮತ್ತು ವೀಡಿಯೊಗಳನ್ನು 2.5 ಲಕ್ಷ ರೂಪಾಯಿ ಆಗಲಿದೆ.ಅದಕ್ಕೆ ಮುಂಗಡವಾಗಿ 1.5 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದರು.
ಆದರೆ ಮದುವೆ ನಂತರ ಚೇತನ್ ಮತ್ತು ಅವರ ಸಂಸ್ಥೆ ರಿಸೆಪ್ಷನ್ ಮತ್ತು ಮುಹೂರ್ತಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋಗಳನ್ನು ಮಾತ್ರ ನೀಡಿದೆ. ದೇವ ಕಾರ್ಯ, ಕಾಶಿಯಾತ್ರೆ, ಸಂಗೀತ ಮತ್ತು ವಧು ಪ್ರವೇಶದ ವಿಡಿಯೋ ನೀಡಲಾಗಲಿಲ್ಲ. ಆ ವೇಳೆಗೆ ಕೆಲಸಕ್ಕೆ ಸುಮಾರು 2.3 ಲಕ್ಷ ರೂಪಾಯಿ ಹಣ ನೀಡಿದ್ದ ಭಟ್, ಛಾಯಾಗ್ರಾಹಕರನ್ನು ಪ್ರಶ್ನಿಸಿದಾಗ ಫುಟೇಜ್ ಸಂಗ್ರಹಿಸಿದ್ದ ಲ್ಯಾಪ್ ಟಾಪ್ ಗೆ ಹಾನಿಯಾಗಿದೆ ಎಂದು ಹೇಳಿದ್ದರು. ಮದುವೆ ಈಗಾಗಲೇ ನಡೆದು ಹೋಗಿದೆ. ಮದುವೆಯನ್ನು ಮಿಸ್ ಮಾಡಿಕೊಂಡ ಸಂಬಂಧಿಕರು ವಿಡಿಯೋಗಳಿಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ ಎಂದು ಭಟ್ ವಾದಿಸಿದರು. ಆದರೆ ಉಳಿದ ವಿಡಿಯೋಗಳನ್ನು ನೀಡಲು ಸಂಸ್ಥೆಗೆ ಸಾಧ್ಯವಾಗಿಲ್ಲ ಎಂದು ಚೇತನ್ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ತಂದೆ 2020ರ ಮಾರ್ಚ್ 10ರಂದು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ಭಟ್ ಸ್ವತಃ ತಾವೇ ವಾದ ಮಂಡಿಸಿದಾಗ, ಪಿಕ್ಸ್ ಬ್ರಿಕ್ಸ್ ಸಂಸ್ಥೆ ಎಲ್ಲಾ ಆರೋಪಗಳನ್ನು ನಿರಾಕರಿಸಿ ವಕೀಲರನ್ನು ನೇಮಿಸಿದರು.
ಸುಮಾರು 12 ತಿಂಗಳ ವ್ಯಾಜ್ಯದ ನಂತರ, ನಾಲ್ಕು ಆಚರಣೆಗಳ ವಿಡಿಯೋಗಳನ್ನು ಕಳೆದುಕೊಂಡಿರುವುದು ಛಾಯಾಚಿತ್ರಗಳ ಏಜೆನ್ಸಿಯ ನಿರ್ಲಕ್ಷ್ಯ ಎಂದು ನ್ಯಾಯಾಧೀಶರು ತೀರ್ಪು ನೀಡಿದರು. 2021ರ ಮಾರ್ಚ್ 6ರಂದು ತೀರ್ಪು ಪ್ರಕಟಿಸಿದ ಅವರು, ಈ ಆದೇಶ ಬಂದ 30 ದಿನಗಳೊಳಗೆ ಭಟ್ ಅವರಿಗೆ 50 ಸಾವಿರ ರೂ.ಗಳನ್ನು ಪಾವತಿಸುವಂತೆ ಚೇತನ್ ಗೆ ನಿರ್ದೇಶನ ನೀಡಿದ್ದರು. ಭಟ್ ಅವರ ವ್ಯಾಜ್ಯ ವೆಚ್ಚಕ್ಕೆ ಹೆಚ್ಚುವರಿಯಾಗಿ 5 ಸಾವಿರ ರೂ. ನೀಡುವಂತೆ ಆದೇಶ ನೀಡಲಾಗಿದೆ.