ವಿಚಾರಣೆಗೆ ​ಹಾಜರಾಗಲು 2 ದಿನ ಗಡುವು ಕೊಟ್ಟು ಡಿಕೆಶಿಗೆ ಸಮನ್ಸ್ ನೀಡಿದ ಸಿಬಿಐ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಆದಾಯಕ್ಕಿಂತ ಎರಡು ಪಟ್ಟು ಅಧಿಕ ಆಸ್ತಿ ಗಳಿಸಿ ರುವ ಆರೋಪ ಎದುರಿಸುತ್ತಿದ್ದು, ನಿನ್ನೆಯಷ್ಟೇ ಸಿಬಿಐ ದಾಳಿ ನಡೆಸಿದೆ.

ಡಿಕೆಶಿಯ ವಿರುದ್ಧ ಎಫ್​ಐಆರ್​ ದಾಖಲಾಗಿರುವ ಕಾರಣ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡ ಲಾಗಿದೆ. ಅವರಿಗೆ ಸೇರಿರುವ 14 ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿರುವ ವೇಳೆ ಮೇಲ್ನೋಟಕ್ಕೆ ಆರೋಪ ಸಾಬೀತಾದ ಕಾರಣಕ್ಕೆ ಈ ಕುರಿತು ಹೆಚ್ಚಿನ ತನಿಖೆ ನಡೆಸಲು ಸಿಬಿಐ ಅಧಿಕಾರಿಗಳು ಮುಂದಾಗಿದ್ದಾರೆ.

ಇನ್ನು ನೆನ್ನೆಯ ದಾಳಿಯ ವೇಳೆ 57 ಲಕ್ಷ ಹಣ ಹಾಗೂ ಕೆಲವೊಂದು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಕೊಂಡಿರುವ ಅಧಿಕಾರಿಗಳು , ಕಳೆದ 5 ವರ್ಷದ ಅವಧಿ ಯಲ್ಲಿ ಡಿಕೆಶಿ ಅವರ ಆದಾಯ 33.92 ಕೋಟಿ ರೂಪಾಯಿ ಯಿಂದ 128.60 ಕೋಟಿ ರೂಪಾಯಿಯಷ್ಟು ಏರಿಕೆ ಆಗಿದೆ.

ಈ ಅವಧಿಯಲ್ಲಿ ಆದಾಯಕ್ಕೂ ಮೀರಿ ಶೇಕಡ 44ರಷ್ಟು ಆಸ್ತಿಯನ್ನು ಹೊಂದಿದ್ದಾರೆ ಎಂದು ಆರೋಪವಿದೆ.ಹಾಗೆ ಇದರ ಬಗ್ಗೆ ಸರಿಯಾದ ಮಾಹಿತಿ ಒದಗಿಸುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ತಿಳಿಸಲಾಗಿದೆ.

ಆದ್ದರಿಂದ ಈ ಎಲ್ಲಾ ಆಸ್ತಿಗಳು ಅವರಿಗೆ ಹೇಗೆ ಬಂದವು, ಇದರ ಮೂಲ ಯಾವುದು ಇತ್ಯಾದಿಗಳ ಬಗ್ಗೆ ಡಿಕೆಶಿ ಸಿಐಬಿ ಮುಂದೆ ತಿಳಿಸಬೇಕು. ಒಂದು ವೇಳೆ ತಮ್ಮ ಆದಾಯದ ಕುರಿತು ಸೂಕ್ತ ದಾಖಲೆ ತೋರಿಸಲಾಗದಿದ್ದರೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಬಂಧನವಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

 
 
 
 
 
 
 
 
 

Leave a Reply