ಡಿಕೆ ರವಿ ಆತ್ಮಹತ್ಯೆಗೆ ರೋಹಿಣಿ ಸಿಂಧೂರಿ ಮೇಲಿನ ವ್ಯಾಮೋಹ ಕಾರಣ : ಸಿಬಿಐ ವರದಿ

ಬೆಂಗಳೂರು : ಮಾಜಿ ಐಎಎಸ್‌ ಅಧಿಕಾರಿ ಡಿ.ಕೆ. ರವಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಸಿಬಿಐ ಅಧಿಕಾರಿಗಳಿಂದ 40 ಪುಟಗಳ ವರದಿಯನ್ನು ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿದೆ.

ಈ ವರದಿಯಲ್ಲಿ ಡಿ.ಕೆ. ರವಿ ಆತ್ಮಹತ್ಯೆಗೆ ರೋಹಿಣಿ ಸಿಂಧೂರಿ ಅವರ ಮೇಲಿನ ವ್ಯಾಮೋಹ ಮತ್ತು ರಿಯಲ್ ಎಸ್ಟೇಟ್ ವ್ಯವಹಾರವೇ ಕಾರಣ ಎಂದು ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ.

ಐಎಎಸ್‌ ತರಬೇತಿ ಸಮಯದಲ್ಲಿಯೇ ಡಿ.ಕೆ. ರವಿಗೆ ರೋಹಿಣಿ ಸಿಂಧೂರಿ ಮೇಲೆ ಪ್ರೀತಿ ಹುಟ್ಟಿಕೊಂಡಿತ್ತು. ಮುಂದೆ 2014 ಸೆ. 1 ರಿಂದ 2015 ಮಾರ್ಚ್ ರ ವರೆಗೆ ನಿರಂತರ ಫೋನ್ ಸಂಪರ್ಕದಲ್ಲಿದ್ದರು. ಈ ಅವಧಿಯಲ್ಲಿಯೇ ಡಿ.ಕೆ. ರವಿ ಅವರು ರೋಹಿಣಿ ಸಿಂಧೂರಿಯವರಿಗೆ 188 ಬಾರಿ ಕರೆ ಮಾಡಿದ್ದಾರೆ. ಹಾಗೆಯೇ ರೋಹಿಣಿ 239 ಬಾರಿ ಕರೆ ಮಾಡಿರುವುದು ದಾಖಲಾಗಿದೆ. ಆದರೆ ಡಿ.ಕೆ. ರವಿ ಅವರ ಆ ಒಂದು ಅಪೇಕ್ಷೆಗೆ ರೋಹಿಣಿ, ರವಿ ಅವರ ಸಂಪರ್ಕದಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದಿದ್ದರು.

ರವಿಗೆ ತಮ್ಮ ಮೇಲಿದ್ದ ಅತಿಯಾದ ಮೋಹದಿಂದ ತಮ್ಮ ಹೆಸರು, ಗೌರವ ಹಾಗೂ ಕೌಟುಂಬಿಕ ಜೀವನಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ ಎಂದು ಅರಿತಿದ್ದ ರೋಹಿಣಿ ಅವರು, ರವಿ ಅವರಿಂದ ದೂರ ಸರಿದಿದ್ದರು. ಡಿ.ಕೆ. ರವಿ ಅವರು ತಮ್ಮ ಪತ್ನಿಗಿಂತ ಹೆಚ್ಚಿನ ಪ್ರಾಶಸ್ತ್ಯ ರೋಹಿಣಿ ಅವರಿಗೆ ನೀಡಿದ್ದರು. ಇದು ತಮ್ಮ ವೈವಾಹಿಕ ಜೀವನದಲ್ಲಿ ಕಿರಿಕಿರಿ ಉಂಟುಮಾಡುತ್ತದೆ ಎಂದು ರೋಹಿಣಿಯೊಂದಿಗೆ ಮಾತನಾಡಲು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆ ಬಿಟ್ಟು ಆಫೀಸ್ ಸಂಖ್ಯೆಬಳಸುತ್ತಿದ್ದರು.

ಭೂಮಿ ಖರೀದಿ ವಿಚಾರದಲ್ಲಿ ಹಣ ಹೂಡುವಂತೆ ರವಿ ಹೇಳಿದ್ದಾಗಿ ರೋಹಿಣಿ ಅವರು ಸಿಬಿಐ ಗೆ ತಿಳಿಸಿದ್ದಾರೆ. ಡಿ.ಕೆ. ರವಿ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ರೋಹಿಣಿ ಅವರ ಕರೆ ಹಾಗೂ ಸಲಹೆಗಾಗಿ ಕಾಯುತ್ತಿರುವ ಕುರಿತು ಮೆಸೇಜ್ ಚಾಟ್ ನಲ್ಲಿ ತಿಳಿದು ಬಂದಿದೆ. ಒಟ್ಟು ಡಿ.ಕೆ. ರವಿಯ ಆತ್ಮಹತ್ಯೆಗೆ ರೋಹಿಣಿ ಸಿಂಧೂರಿ ಮೇಲಿನ ವ್ಯಾಮೋಹ ಹಾಗೂ ರಿಯಲ್ ಎಸ್ಟೇಟ್ ಉದ್ಯಮವೇ ಕಾರಣ ಎಂದು ಸಿಬಿಐ ವರದಿ ತಿಳಿಸಿದೆ.

 
 
 
 
 
 
 
 
 
 
 

Leave a Reply