ಕೊರೋನಾ ಅಟ್ಟಹಾಸ: ಶವ ಸುಡೋದಕ್ಕೂ ಇಲ್ಲ ಜಾಗ

ಬೆಂಗಳೂರು : ಕೊರೊನಾ ಸೋಂಕಿನ ಆರ್ಭಟಕ್ಕೆ ರಾಜ್ಯ ರಾಜಧಾನಿ ತತ್ತರಿಸಿದ್ದು, ಕೋವಿಡ್ ಸೋಂಕಿಗೆ ತುತ್ತಾದ್ರೆ ಇದೀಗ ಆಸ್ಪತ್ರೆಯಿಲ್ಲ. ಒಂದೊಮ್ಮೆ ಮೃತಪಟ್ಟರೆ ಸ್ಮಶಾನದಲ್ಲೂ ಜಾಗವಿಲ್ಲ.

 ನಗರದ ಚಾಮರಾಜಪೇಟೆಯ ಟಿ ಆರ್ ಮಿಲ್ ಸಮೀಪ ದಲ್ಲಿರುವ ಸ್ಮಶಾನದ ಗೇಟ್ ಬಳಿಯಲ್ಲಿ ಹೌಸ್ ಪುಲ್ ಬೋರ್ಡ್ ಹಾಕಿದ್ದಾರೆ. ಈ ಬೋರ್ಡ್ ಇದೀಗ ಸಿಲಿಕಾನ್ ಸಿಟಿಯ ಕೊರೊನಾ ಭೀಕರತೆಯನ್ನು ಅನಾವರಣಗೊಳಿಸಿದೆ.ಸ್ಮಶಾನದಲ್ಲಿ ಪ್ರತಿನಿತ್ಯವೂ 20 ಶವಗಳ ಅಂತ್ಯಕ್ರಿಯೆ ನಡೆಸಲು ಅವಕಾಶವಿದೆ. 

ಆದರೆ ಬೆಂಗಳೂರಿನಲ್ಲಿ ಕರೋನಾದಿಂದ ಮೃತರಾಗುವವರ ಸಂಖ್ಯೆ ಹೆಚ್ಚಿದೆ. ಇದರಿಂದ 19 ಮೃತದೇಹಗಳ ದಹನಕ್ಕೆ ಬುಕ್ಕಿಂಗ್ ಆಗಿದ್ದು, ಸ್ಮಶಾನದಲ್ಲಿ ಹೌಸ್ ಪುಲ್ ಬೋರ್ಡ್  ಹಾಕಲಾಗಿದೆ ಎನ್ನುತ್ತಾರೆ ಸ್ಮಶಾನ ಸಿಬ್ಬಂದಿ.

 

 

 

 
 
 
 
 
 
 
 
 

Leave a Reply