ಸರ್ಜಾ ಕುಟುಂಬಕ್ಕೆ ಮರಳಿ ಬಂದ ಚಿರು- ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾ

ಬೆಂಗಳೂರು: ಸರ್ಜಾ ಕುಟುಂಬದ ಖುಷಿ ಇಂದು ಮತ್ತೆ ಮರಳಿದೆ. ಸ್ಯಾಂಡಲ್‌ವುಡ್ ನಟ ಚಿಂರಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷವೆಂದರೆ ಚಿರು ಹಾಗೂ ಮೇಘನಾ ನಿಶ್ಚಿತಾರ್ಥದ ದಿನವೇ ಜ್ಯೂನಿಯರ್ ಚಿರು ಎಂಟ್ರಿಯಾಗಿದೆ.ಈ ವಿಷಯ ಅಭಿಮಾನಿಗಳು ಹಾಗೂ ಕುಟುಂಬಸ್ಥರಲ್ಲಿ ಅತೀವ ಸಂತಸ ತಂದಿದೆ. ಇಂದು 11:07ಕ್ಕೆ ಮೇಘನಾ ರಾಜ್ ತಮ್ಮ ಪುತ್ರನಿಗೆ ಜನ್ಮ ನೀಡಿದ್ದಾರೆ. ಸದ್ಯ ಮಗುವಿನ ತೂಕ 2 ಕೆ.ಜಿ.700 ಗ್ರಾಂ ಇದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ವೈದ್ಯರು ನೀಡಿದ್ದಾರೆ.

ಮೇಘನಾ ರವರುಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು. ಧ್ರುವ ಸರ್ಜಾ, ಪತ್ನಿ ಪ್ರೇರಣಾ ಹಾಗೂ ಚಿರು ಅವರ ತಾಯಿ ಅಮ್ಮಾಜಿ ಕೂಡ ಆಸ್ಪತ್ರೆಯಲ್ಲಿಯೇ ಅವರೊಂದಿಗೆ ಇದ್ದರು. ಇನ್ನು ಅಭಿಮಾನಿಗಳಂತೂ ಚಿರು ಮತ್ತೆ ಹುಟ್ಟಿದ್ದಾರೆ ಎಂದು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.ಇಂದು ಆಸ್ಪತ್ರೆ ಮುಂದೆ ನೂರಾರು ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

 
 
 
 
 
 
 
 
 
 
 

Leave a Reply