ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭ

ಬೆಂಗಳೂರು: ಪರಿಸರ ಮಾಲಿನ್ಯ ಕಡಿಮೆ ಮಾಡಿ , ಪರಿಸರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಬಿಎಂಟಿಸಿ ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬಸ್​ಗಳನ್ನು ಪಡೆಯುತ್ತಿದೆ. ಅದರ ಭಾಗವಾಗಿ ಖಾಸಗಿ ಸಂಸ್ಥೆ ಒಂದು ನೀಡಿದ್ದು, ಅದರ ಪ್ರಾಯೋಗಿಕ ಸಂಚಾ ರಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಗುರುವಾರ ಚಾಲನೆ ನೀಡಿದ್ದಾರೆ.

ಅನಂತರದಲ್ಲಿ ಶಾಂತಿನಗರದಿಂದ ವಿಧಾನಸೌಧವರೆಗೆ ಲಕ್ಷ್ಮಣ ಸವದಿ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಮತ್ತು ಕೆಲವು ಅಧಿಕಾರಿಗಳು ನೂತನ ಬಸ್​ನಲ್ಲಿ ಸಂಚರಿಸಿದರು. ವಿಧಾನಸೌಧಕ್ಕೆ ಬರುತ್ತಿದ್ದಂತೆ ಲಕ್ಷ್ಮಣ ಸವದಿ ಚಾಲಕನ ಸೀಟಿನಲ್ಲಿ ಕುಳಿತು ಬಿಎಂಟಿಸಿ ಮತ್ತು ಬಸ್ ಮಾಲೀಕತ್ವ ಸಂಸ್ಥೆಯ ಅಧಿಕಾರಿಗಳಿಂದ ಬಸ್ ಬಗ್ಗೆ ಹಲವು ಮಾಹಿತಿ ಪಡೆದರು.

ಸದ್ಯ ಕೇಂದ್ರ ಸರ್ಕಾರದ ‘ಫೇಮ್ ಇಂಡಿಯಾ- 2’ ಯೋಜನೆಯಡಿ ಬಿಎಂಟಿಸಿಗೆ 300 ಎಲೆಕ್ಟ್ರಿಕ್ ಬಸ್​ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲಾಗುತ್ತಿದೆ. ಮುಂದಿನ 30 ದಿನಗಳ ಕಾಲ ಈ ವಿದ್ಯುತ್ ಬಸ್ ನಗರದ ವಿವಿಧ ಮಾರ್ಗಗಳಲ್ಲಿ ಸಂಚ ರಿಸಲಿದೆ. ಈ ಯೋಜನೆಯಡಿ ಪ್ರತಿ ಬಸ್​ಗೆ ಕೇಂದ್ರ ಸರ್ಕಾರ 55 ಲಕ್ಷ ರೂ.ಮತ್ತು ರಾಜ್ಯ ಸರ್ಕಾರ ರೂ.33.33 ಲಕ್ಷ ರೂ. ನೀಡಲಿದೆ. ಒಟ್ಟು 88.33 ಲಕ್ಷ ರೂ. ಪ್ರೋತ್ಸಾಹ ಧನದೊಂದಿಗೆ ಎಲೆಕ್ಟ್ರಿಕ್ ಬಸ್​ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಬಿಎಂಟಿಸಿಯಷ್ಟೇ ಅಲ್ಲದೆ, ಕೆಎಸ್ಸಾರ್ಟಿಸಿ ಮತ್ತು ಎನ್​ಇಕೆಆರ್​ಟಿಸಿಗೂ ತಲಾ 50 ವಿದ್ಯುತ್ ಬಸ್​ಗಳನ್ನು ಸೇರ್ಪಡೆ ಮಾಡಲಾಗುತ್ತಿದ್ದು, ಸ್ಮಾರ್ಟ್​ಸಿಟಿ ಯೋಜನೆಯಡಿ ಬಿಎಂಟಿಸಿಗೆ ಹೆಚ್ಚುವರಿಯಾಗಿ 90 ಮಿನಿ ವಿದ್ಯುತ್ ಬಸ್ ಖರೀದಿ ಮಾಡಲಾಗುತ್ತದೆ. ಈ ಕುರಿತು ಮಾತನಾಡಿದ ಸಿಎಂ ಯಡಿಯೂರಪ್ಪ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಲಕ್ಷ್ಮಣ ಸವದಿ ಮತ್ತು ಬಿಎಂಟಿಸಿ ಅಧಿಕಾರಿಗಳ ಕ್ರಮವನ್ನು ಮುಖ್ಯಮಂತ್ರಿ ಬಿಎಸ್​ವೈ ಶ್ಲಾಘಿಸಿದ್ದಾರೆ.

ಸಚಿವ ಲಕ್ಷ್ಮಣ ಸವದಿ ಮಾತನಾಡಿ, ಪರಿಸರ ಸಂರಕ್ಷಣೆ ದೃಷ್ಟಿಯಿಂದ ಎಲೆಕ್ಟ್ರಿಕ್ ಬಸ್​ಗಳನ್ನು ಸೇರ್ಪಡೆ ಮಾಡ ಲಾಗುತ್ತಿದೆ. ಸದ್ಯ ಒಂದು ಬಸ್ಸನ್ನು ಪ್ರಾಯೋಗಿಕ ಸಂಚಾರಕ್ಕೆ ಪಡೆಯಲಾಗಿದ್ದು, ಸಮರ್ಪಕವಾಗಿದ್ದರೆ ಇನ್ನಷ್ಟು ಬಸ್ ಖರೀದಿಸಲಾಗುವುದು ಎಂದರು.

ಈ ಬಸ್ನನಲ್ಲಿ ವಿಶೇಷತೆಗಳು ಹವಾನಿಯಂತ್ರಿತ ವ್ಯವಸ್ಥೆಯಿದ್ದು, 12 ಮೀ. ಉದ್ದ, ಫ್ಲೋರ್ ಎತ್ತರ 400 ಮಿ.ಮೀ., 35 ಆಸನಗಳು, ಆಟೋಮ್ಯಾಟಿಕ್ ಗೇರ್, ಮುಂದೆ ಮತ್ತು ಹಿಂದೆ ಡಿಸ್ಕ್ ಬ್ರೇಕ್ ಹಾಗೂ ಎಲೆಕ್ಟ್ರಾನಿಕ್ ನಿಯಂತ್ರಿತ ಏರ್ ಸಸ್ಪೆನ್ಷನ್ ಹಾಗೂ 2ರಿಂದ 3 ಗಂಟೆ ಫಾಸ್ಟ್ ಚಾರ್ಜಿಂಗ್ ಸೌಕರ್ಯವಿದೆ. ಹಾಗೂ ಒಮ್ಮೆ ಚಾರ್ಜ್ ಮಾಡಿದರೆ 200 ರಿಂದ 250 ಕಿ.ಮೀ. ಪ್ರಯಾಣಿಸಬಹುದು.

 
 
 
 
 
 
 
 
 
 
 

Leave a Reply