ಕೋವಿಡ್ ನಿಯಮ‌ ಉಲ್ಲಂಘಿಸಿ ದಂಡ‌ಕಟ್ಟಿದ ಮದು‌ಮಗಳು

ಹಾಸನ : ಮದುಮಗಳೋರ್ವಳು ಕೊರೋನಾ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಕ್ಕೆ‌ ಸಂಬಂಧಿಸಿ ದಂಡ ಪಾವತಿಸಿದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ‌‌ನಡೆದಿದೆ.

ಮದುಮಗಳು ಮದುವೆ ಮುಗಿಸಿ ಹೊರಡುವ ವೇಳೆ ಮಾಸ್ಕ್ ಧರಿಸಿರಲಿಲ್ಲ. ಇದೇ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ರೇಣುಕುಮಾರ್ ಅವರು ವಧುವಿಗೆ 100 ರೂಪಾಯಿ ದಂಡ ವಿಧಿಸಿದ್ದಾರೆ.

 ಕೋವಿಡ್ ಎರಡನೇ ಅಲೆ ತೀವ್ರ ವಾಗಿರುವ ಹಿನ್ನೆಲೆ ರಾಜ್ಯ ಸರಕಾರ ವಿವಾಹ ಸಮಾರಂಭಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿ, ಮದುವೆಯಲ್ಲಿ 50 ಜನರಿಗಷ್ಟೇ ಭಾಗವಹಿಸಲು ಅವಕಾಶ ನೀಡಿದೆ.

 
 
 
 
 
 
 
 
 
 
 

Leave a Reply