ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2 ಕಾರ್ಯಾರಂಭ

ಸಾವಿರಾರು ಕೋಟಿ ವೆಚ್ಚದ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ನೂತನ ಟರ್ಮಿನಲ್‌-2 ಇಂದು ಕಾರ್ಯಾರಂಭವಾಗಿದೆ.

ಕಳೆದ ನವೆಂಬರ್‌ನಲ್ಲಿ ಪ್ರಧಾನಿ ಮೋದಿ ರ್ಮಿನಲ್-2ಗೆ ಉದ್ಘಾಟನೆ ಮಾಡಿದ್ದು, ಕಾಮಗಾರಿ ಇದೀಗ ಬಹುತೇಕ ಶೇ,90ರಷ್ಟು ಮುಗಿದಿದೆ.

ಕೆಂಪೇಗೌಡ ಏರ್‌ಪೋರ್ಟ್‌ ಆಡಳಿತ ಮಂಡಳಿ ಇಂದಿನಿಂದ ಹೈಫೈ ಏರ್‌ಪೋರ್ಟ್‌ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಿದೆ.

ಸಂಕ್ರಾಂತಿ ಸಂಭ್ರಮದ ಪ್ರಯುಕ್ತ ಹೊಸ ಟರ್ಮಿನಲ್ ಕಾರ್ಯಾರಂಭ ಮಾಡಿದ್ದು, ಈಗಾಗಲೇ ಹೊಸ ಟರ್ಮಿನಲ್‌ನಿಂದ ಮೊದಲ ವಿಮಾನ ಕಲ್ಬುರ್ಗಿಗೆ ಪ್ರಯಾಣ ಬೆಳೆಸಿದೆ.

ಹೊಸ ಟರ್ಮಿನಲ್‌ನ ಫೋಟೊ, ವಿಡಿಯೋಗಳು ಎಲ್ಲೆಡೆ ವೈರಲ್ ಆಗಿದ್ದು, ಇದೀಗ ಸಾರ್ವಜನಿಕರು ಟರ್ಮಿನಲ್ ನೋಡಲು ಅವಕಾಶ ಸಿಕ್ಕಿದೆ. ಮೊದಲ ಹಂತವಾಗಿ ಹೊಸ ಟರ್ಮಿನಲ್‌ನಲ್ಲಿ ಸ್ಟಾರ್ ಏರ್ವಿ ವಿಮಾನಗಳು ಮಾತ್ರ ಹಾರಾಡಲಿವೆ.

 
 
 
 
 
 
 
 
 
 
 

Leave a Reply