ಬೆಂಗಳೂರು ನಗರದ 36ನೇ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ಅಧಿಕಾರ ಸ್ವೀಕಾರ 

 ಬೆಂಗಳೂರು: ನಗರದ 36ನೇ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ಇಂದು​ ​ಬೆಳಗ್ಗೆ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅಧಿಕಾರ ಹಸ್ತಾಂತರಿಸಿದರು.​ ಕರೊನಾ ಸೋಂಕಿನಿಂದ ಮೃತಪಟ್ಟ ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ಮರಿಸಿದ ನೂತನ ಪೊಲೀಸ್ ಆಯುಕ್ತರು, ‘ಇಂದು ನಾನು ಬೆಂಗಳೂರು ನಗರ ಪೊಲೀಸ್ ಆಯುಕ್ತನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಸರ್ಕಾರ ಕೊಟ್ಟ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ’ ಎಂದರು.​ 

ಪೊಲೀಸ್​ ಆಯುಕ್ತರಾಗಿ ಅಧಿಕಾರ ಸ್ವೀಕರಿ ಮಾತನಾಡಿದ ಕಮಲ್​ ಪಂತ್​, ‘ಮಹಿಳೆಯರು, ಮಕ್ಕಳು, ವೃದ್ಧರ ರಕ್ಷಣೆ ನಮ್ಮ ಹೊಣೆ’ ಎಂದರು. ​ ‘ಸೈಬರ್ ಕ್ರೈಂ, ಮಾದಕವಸ್ತು ಮಾರಾಟ ಜಾಲ ಮತ್ತು ರೌಡಿಗಳ ಮೇಲೆ ಹದ್ದಿನ ಕಣ್ಣಿಡಲಾಗುವುದು’ ಎನ್ನುವ ಮೂಲಕ ಪಾತಕಿಗಳ ಅಟ್ಟಹಾಸಕ್ಕೆ ಬ್ರೇಕ್​ ಹಾಕುವುದಾಗಿ ಎಚ್ಚರಿಸಿದರು.​  ನಗರದ ಜಂಟಿ ಪೊಲೀಸ್ ಆಯುಕ್ತರು, ಡಿಸಿಪಿಗಳು ಉಪಸ್ಥಿತರಿದ್ದರು.

Leave a Reply