ಭಾರತ್ ಬಂದ್ ಗೆ ಬೆಂಬಲವಿಲ್ಲ, ರಾಜ್ಯದಲ್ಲಿ ಬಸ್ ಸಂಚಾರ ಇರಲಿದೆ : ಸಚಿವ ಬಿ.ಶ್ರೀರಾಮುಲು

ಬೆಂಗಳೂರು : ರೈತರು ಕರೆ ನೀಡಿರುವ ಭಾರತ್ ಬಂದ್ ಗೆ ಬೆಂಬಲವಿಲ್ಲ. ಎಂದಿನಂತೆ ರಾಜ್ಯದಲ್ಲಿ ಬಸ್ ಸಂಚಾರ ಇರಲಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ಎಂದಿನಂತೆ ಬಸ್ ಸಂಚಾರ ಇರುತ್ತದೆ, ರಾಜ್ಯದ ಎಲ್ಲಾ ಕಡೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಾರಿಗೆ ಬಸ್ ಗಳು ಸಂಚಾರ ನಡೆಸಲಿದೆ ಎಂದು ಶ್ರೀರಾಮುಲು ಹೇಳಿದರು.

ಕಾಂಗ್ರೆಸ್ ರೈತರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದೆ. ರೈತರು ನೀಡಿರುವ ಭಾರತ ಬಂದ್‍ಗೆ ಸಾರಿಗೆ ಇಲಾಖೆ ಮತ್ತು ಸರ್ಕಾರದಿಂದ ಬೆಂಬಲವಿಲ್ಲ. ರಾಜ್ಯದ ಎಲ್ಲ ಕಡೆಗೂ ಸಾರಿಗೆ ಬಸ್‍ಗಳು ಸಂಚಾರ ನಡೆಸಲಿವೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಂದಿನಂತೆ ಬಸ್ ಸಂಚಾರ ಇರಲಿದೆ ಎಂದು ಹೇಳಿದರು.ರೈತರ ಹೆಸರು ಇಟ್ಟುಕೊಂಡು ತಮ್ಮ ಸ್ವಾರ್ಥಕ್ಕಾಗಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು.

ಅಸಲಿ ರೈತರು ಬಿಜೆಪಿ ಜೊತೆಗಿದ್ದಾರೆ. ನಕಲಿ ಅನೋದಕ್ಕಿಂತ ಬಿಳಿ ಬಟ್ಟೆ ಹಾಕಿ ರಾಜಕಾರಣ ಮಾಡುತ್ತಿರುವ ರೈತರು ನಿಜವಾದ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

 
 
 
 
 
 
 
 
 
 
 

Leave a Reply