Janardhan Kodavoor/ Team KaravaliXpress
29.6 C
Udupi
Thursday, January 20, 2022
Sathyanatha Stores Brahmavara

ಜೀವದ ಹಂಗನ್ನೇ ತೊರೆದಿದ್ದ ಮಗುವಿನಲ್ಲಿ ಮೂಡಿದೆ ಹೊಸ ಆಕಾಂಕ್ಷೆ

ದುಷ್ಕರ್ಮಿಗಳು ಹೊಲದಲ್ಲಿ ಎಸೆದು ಹೋಗಿದ್ದ ನವಜಾತ ಶಿಶುವನ್ನು ಬೀದಿ ನಾಯಿಯೊಂದು ರಾತ್ರಿಯಿಡೀ ಕಾವಲು ಕಾದು ಮಗುವಿನ ಪ್ರಾಣ ಉಳಿಸಿದ ಹೃದಯ ವಿದ್ರಾವಕ ಘಟನೆ ಛತ್ತೀಸಗಡದಲ್ಲಿ ನಡೆದಿದೆ. ಮನುಷ್ಯ ಕುಲಕ್ಕಿಂತ ಮೂಕ ಪ್ರಾಣಿಯೇ ಲೇಸು ಎಂಬುದನ್ನ ಜಗತ್ತಿಗೆ ಸಾರಿ ಸಾರಿ ಹೇಳುವಂತಿದೆ ಈ ಘಟನೆ.

ಇಂತಹ ಘಟನೆ ಮುಂಗೇಲಿ ಜಿಲ್ಲೆ ಲೊರ್ಮಿಯ ಸರಿಸ್ತಾಲ್​ ಗ್ರಾಮದಲ್ಲಿ ಮೂರು ದಿನದ ಹಿಂದೆ ನಡೆದಿದೆ. ಹೆಣ್ಣು ಮಗು ಎಂಬ ಕಾರಣಕ್ಕೋ ಅಥವಾ ಅಕ್ರಮ ಸಂಬಂಧದ ಫಲವೋ ಏನೋ ಆಗಷ್ಟೇ ಜನಿಸಿದ ಕೂಸನ್ನು ಯಾರೋ ದುಷ್ಕರ್ಮಿಗಳು ಜಮೀನೊಂದರಲ್ಲಿ ಇಟ್ಟು ಹೋಗಿದ್ದಾರೆ. ಹೊಕ್ಕಳು ಬಳ್ಳಿಯೊಂದಿಗೆ ಯಾವುದೇ ಬಟ್ಟೆ ಇಲ್ಲದೆ ಮಗು ಅನಾಥವಾಗಿ ಅಲ್ಲೇ ಇತ್ತು. ಅನಾಥವಾಗಿ ಬಿದ್ದಿದ್ದ ಶಿಶುವನ್ನ ಬೀದಿನಾಯಿಯೊಂದು ಹಸುಗೂಸಿನ ಜತೆಗೆ ತನ್ನ ಮರಿಗಳನ್ನೂ ಮಲಗಿಸಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ರಾತ್ರಿಯಿಡೀ ಕಾವಲು ಕಾದಿದೆ.

ಬೆಳಗ್ಗೆ ಮಗು ಅಳುವ ಶಬ್ದ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಬಂದು ನೋಡಿದಾಗ ನಾಯಿಮರಿಗಳ ಜತೆ ಹಸುಗೂಸು ಮಲಗಿರುವುದು ಕಂಡುಬಂದಿದೆ. ಕೂಡಲೇ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿ, ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ. ಮಗುವಿನ ಮೈಮೇಲೆ ಯಾವುದೇ ಗಾಯದ ಗುರುತು ಇರಲಿಲ್ಲ. ಸ್ಥಳೀಯ ಆಸ್ಪತ್ರೆಯಲ್ಲಿ ಮಗುವಿನ ಆರೋಗ್ಯ ತಪಾಸಣೆ ಮಾಡಿಸಿದ್ದು, ಮಗು ಆರೋಗ್ಯವಾಗಿದೆ. 

ಸದ್ಯ ಈ ಮಗುವನ್ನ ಮಕ್ಕಳ ಕಲ್ಯಾಣ ಇಲಾಖೆ ಸುಪರ್ದಿಗೆ ಕೊಡಲಾಗಿದ್ದು, ಮಗುವನ್ನ ಎಸೆದು ಹೋದ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಈ ಮಗುವಿಗೆ ಆಕಾಂಕ್ಷ ಎಂದು ಹೆಸರಿಡಲಾಗಿದೆ. ನಾಯಿ ಮರಿಗಳ ಜತೆ ಮಗು ಇದ್ದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!