ರಾಜ್ಯ ಮಟ್ಟದ ಕೃಷಿ ಸಮ್ಮೇಳನದ ತಯಾರಿಯ ಪೂರ್ವಭಾವಿ ಸಭೆ

ಇದೇ ಬರುವ ಮಾರ್ಚ್ 3,4,5 ಮೂರು ದಿನಗಳ ಕಾಲ ರಾಷ್ಟ್ರದ ಹಾಗೂ ರಾಜ್ಯದ ಸಾಧಕ ಕೃಷಿಕರ ಮಾರ್ಗದರ್ಶನದಲ್ಲಿ ಉಡುಪಿಯ ಹಿರಿಯಡಕದಲ್ಲಿ ನಡೆಯುವ ರಾಜ್ಯ ಮಟ್ಟದ ಕೃಷಿ ಸಮ್ಮೇಳನದ ಪೂರ್ವಭಾವಿ ಸಭೆ ಹಿರಿಯಡಕ ದೇವಸ್ಥಾನದ ಸಭಾಂಗಣದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮುಂಡುಜೆ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತರಾದ ಕುದಿ ಶ್ರೀನಿವಾಸ ಭಟ್ ಮಾರ್ಗದರ್ಶನ ಮಾಡಿದರು. ಕೃಷಿ ಸಮ್ಮೇಳನದ ರೂಪುರೇಷೆಗಳ ಮಾಹಿತಿಯನ್ನು ಕೃಷಿಕರಾದ ನಟರಾಜ್ ಹೆಗ್ಡೆ ನೀಡಿದರು.

ಶಿಕ್ಷಕರಾದ ನವೀನ್ ಶೆಟ್ಟಿ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು. ಉಪಸ್ಥಿತಿರಿದ್ದ ಕೃಷಿಕರು ಸಮ್ಮೇಳನದ ಯಶಸ್ಸುವಿಗೆ ಸೂಚನೆಗಳನ್ನು ನೀಡಿದರು. ಸಭೆಯ ನಿರ್ಣಯದಂತೆ ಮಾರ್ಚ್ 3,4,5 ಮೂರು ದಿನಗಳ ಕಾಲ ನಡೆಯುವ ಕೃಷಿ ಸಮ್ಮೇಳನದಲ್ಲಿ ಆಸಕ್ತ ಕೃಷಿಕರಿಗೆ ಮತ್ತು ಕೃಷಿಗೆ ಸಂಬಂಧಿಸಿದ ಉದ್ಯಮಿಗಳಿಗೆ ಸ್ಟಾಲ್ ಒದಗಿಸಿ ಕೊಡಲಾಗುತ್ತದೆ.
ಸಮ್ಮೇಳನದಲ್ಲಿ ವಿಶೇಷವಾಗಿ ದೇಸಿ ಗೋವುಗಳ ಪ್ರದರ್ಶನ ನಡೆಯಲಿದೆ.
ಮೀನುಗಾರಿಕ ಪ್ರದರ್ಶನ, ಶ್ವಾನಗಳ ಪ್ರದರ್ಶನ ಕೂಡ ನಡೆಯಲಿದೆ.

 
 
 
 
 
 
 
 
 

Leave a Reply