Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ಗೂಡ್ಸ್ ವಾಹನ-ಎಕ್ಸ್‌ಯುವಿ ಮಧ್ಯೆ ಭೀಕರ ಅಪಘಾತ; ಓರ್ವ ಸಾವು, ಇಬ್ಬರು ಗಂಭೀರ!

ಎರಡು ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದು ವಾಹನ ಸೇತುವೆ ಮೇಲಿಂದ 30 ಅಡಿ ಕೆಳಗೆ ನದಿಗೆ ಬಿದ್ದ ಪ್ರಕರಣವೊಂದು ನಡೆದಿದೆ. ವಿಜಯಪುರ ಜಿಲ್ಲೆಯಲ್ಲಿ ಇಂದು ಈ ಅಪಘಾತ ಸಂಭವಿಸಿದ್ದು, ಒಬ್ಬ ಸಾವಿಗೀಡಾದರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವಿಜಯಪುರ ಜಿಲ್ಲೆ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಹುನಗುಂದ ಹಾಗೂ ಕೂಡಲಸಂಗಮ ಮಧ್ಯದಲ್ಲಿರುವ ಬೆಳಗಲ್ಲ ಸೇತುವೆ ಮೇಲೆ ಈ ಅಪಘಾತ ಸಂಭವಿಸಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಹಿಂದ್ರಾ ಗೂಡ್ಸ್ ವಾಹನ ಹಾಗೂ
ಮಹಿಂದ್ರಾ ಎಕ್ಸ್ಯುವಿ ಮಧ್ಯೆ ಈ ಅಪಘಾತವಾಗಿದೆ.
 

ಎಕ್ಸ್‌ಯುವಿ ವಾಹನ ಗೂಡ್ಸ್ ವಾಹನಕ್ಕೆ ಹಿಂಬದಿಯಿಂದ ಗುದ್ದಿದ್ದು, ಆ ರಭಸಕ್ಕೆ ಗೂಡ್ಸ್ ವಾಹನ ಸೇತುವೆಯಿಂದ ನದಿಗೇ ಬಿದ್ದಿದೆ. ಗೂಡ್ಸ್ ವಾಹನ ಇಳಕಲ್‌ನಿಂದ ಟೈಲ್ಸ್ ತುಂಬಿಕೊಂಡು ಹೊರಟಿತ್ತು. ಎಕ್ಸ್ಯುವಿ ಚಾಲಕನ ಅತಿವೇಗದ ಚಾಲನೆಯೇ ಈ ಭೀಕರ
ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಪ್ರಕರಣದಲ್ಲಿ ಗೂಡ್ಸ್ ವಾಹನದಲ್ಲಿದ್ದ ಒಬ್ಬ ಸ್ಥಳದಲ್ಲೇ ಸಾವಿಗೀಡಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಕ್ಸ್
ಯುವಿನಲ್ಲಿದ್ದ ಡ್ರೈವರ್, ಗಂಡ, ಹೆಂಡತಿ, ಇಬ್ಬರು ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲ ಗಾಯಾಳುಗಳನ್ನು ಹುನಗುಂದ
ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!