ರಾಜ್ಯದ ಹತ್ತು ಜಿಲ್ಲೆಗಳಿಗೆ ಮೂರನೇ ಅಲೆಯಲ್ಲಿ ಹೆಚ್ಚಿನ ಸೋಂಕು ಸಾಧ್ಯತೆ

ಬೆಂಗಳೂರು : ಕೊರೋನಾ ಎರಡನೇ ಅಲೆ ಕೊನೆಗೊಳ್ಳುತ್ತಿದ್ದು, ಈಗ 3ನೇ ಅಲೆ ಶುರುವಾಗುವ ಆತಂಕ ಎಲ್ಲೆಡೆಯಿದೆ.ಜನರು ಇನ್ನು ಮುಂದೆಯೂ ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ, ನಿರ್ಲಕ್ಷ್ಯ ತೋರಿದರೆ ಆಪತ್ತು ಕಟ್ಟಿಟ್ಟ ಬುತ್ತಿ. 

ಮೂಲ ಕೊರೋನಾ ಸೋಂಕು ಎಲ್ಲಾ ದೇಶಗಳಿಗೆ ಹರಡಿದೆ.ಜನರ ದೇಹ ಸೇರಿರುವ ವೈರಾಣು ಅಲ್ಲಿನ ಪ್ರಾದೇಶಿಕವಾರು ವಾತಾವರಣಕ್ಕೆ ಅನುಗುಣವಾಗಿ ಹೊಸ ತಳಿಯಾಗಿ ಬದಲಾಗುತ್ತಿದೆ. ಯುಕೆ ರೂಪಾಂತರಿ, ಸೌತ್ ಆಫ್ರಿಕಾ ರೂಪಾಂತರಿ ಉತ್ತಮ ಉದಾಹರಣೆಯಾಗಿದೆ. ಇದೀಗ ಡೆಲ್ಟಾ ಪ್ಲಸ್ ರೂಪಾಂತರಿ ರಾಜ್ಯದಲ್ಲೂ ಪತ್ತೆಯಾಗಿದೆ. ಇದು ಮೂರನೇ ಅಲೆಯ ಭೀಕರತೆಗೆ ಸಾಕ್ಷಿಯಾಗಲಿದೆ ಎಂಬ ಅನುಮಾನ ಕಾಡುತ್ತಿದೆ.

ಜಿಲ್ಲಾ ಮಟ್ಟದಲ್ಲಿ ಮೂರನೇ ಅಲೆಗೆ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು, ಮೂರನೇ ಅಲೆಯಲ್ಲಿ ಟಾರ್ಗೆಟ್ ಆಗುವ ಜಿಲ್ಲೆಗಳು ಯಾವುವು, ಮುನ್ನೆಚ್ಚರಿಕೆಯನ್ನು ಯಾವ ಜಿಲ್ಲೆ ಹೆಚ್ಚು ವಹಿಸಬೇಕು,ಎಚ್ಚರ ತಪ್ಪಿದ್ರೆ ಎಷ್ಟರ ಮಟ್ಟಿಗೆ ಅಪಾಯ ಆಗಲಿದೆ ಎಂಬುದನ್ನು ತಜ್ಞರು ಅಂದಾಜಿಸಿದ್ದಾರೆ. ಮಹಾರಾಷ್ಟ್ರ- ಕೇರಳ ಗಡಿಭಾಗದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಮಹಾರಾಷ್ಟ್ರ- ಕೇರಳ ರಾಜ್ಯದಲ್ಲಿ ಮೊದಲು ಕೊರೋನಾ ರೂಪಾಂತರಿ ಪತ್ತೆಯಾಗಿರುವುದು.

ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಾದ ಬೆಳಗಾವಿ, ಉತ್ತರಕನ್ನಡ, ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚು ನಿರ್ಬಂಧ ಅಗತ್ಯ ಎಂದು ಊಹಿಸಲಾಗಿದೆ. ಕೇರಳ ಗಡಿ ಭಾಗಗಳಾದ ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಎಚ್ಚರಿಕೆ ಅಗತ್ಯ. ಗಡಿ ಭಾಗದಿಂದ ಆಗಮಿಸುವ ಜನರಿಗೆ ರ್ಯಾಂಡಮ್​​ ಟೆಸ್ಟ್ ಮಾಡುವುದು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವ , ಆರ್​​ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಇದ್ದರಷ್ಟೇ ಪ್ರವೇಶಿಸಲು ಅನುಮತಿ ನೀಡಬೇಕು. ಕೋವಿಡ್ ಮೂರನೇ ಅಲೆಯ ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.2.2 ಮಂದಿ ಸೋಂಕಿಗೀಡಾಗಬಹುದು. ಅಂದರೆ 15.4ಲಕ್ಷ ಮಂದಿಗೆ ಸೋಂಕು ತಗುಲಬಹುದು. 18 ವರ್ಷದೊಳಗಿನ 2.38 ಕೋಟಿ ಮಕ್ಕಳು ಇದ್ದು, ಸುಮಾರು 3.40 ಲಕ್ಷ ಮಕ್ಕಳಲ್ಲಿ ಸೋಂಕು ಪತ್ತೆಯಾಗುವ ಸಾಧ್ಯತೆ ಇದೆ. 8 ವಾರಗಳ ಕಾಲ ಮೂರನೇ ಅಲೆ ಬಾಧಿಸಬಹುದೆಂದು ಅಂದಾಜಿಸಲಾಗಿದೆ.ಅತೀ ಹೆಚ್ಚು ಪ್ರಕರಣ ಕಂಡುಬರಬಹುದಾದ ಟಾಪ್ 10 ಜಿಲ್ಲೆಗಳು.ಜಿಲ್ಲೆ- ಜನಸಂಖ್ಯೆ- 3ನೇ ಅಲೆ ಸೋಂಕಿತರ ಸಂಖ್ಯೆ (0-18 ವರ್ಷ ವಯೋಮಾನ)

1. ಬೆಂಗಳೂರು ನಗರ- 32,21,795 ಜನಸಂಖ್ಯೆ- 45,958 ಮಕ್ಕಳಿಗೆ ಸೋಂಕು

2. ಬೆಳಗಾವಿ- 20,01,176 ಜನಸಂಖ್ಯೆ- 28,546 ಮಕ್ಕಳಿಗೆ ಸೋಂಕು

3. ಕಲಬುರಗಿ- 12,15,432 ಜನಸಂಖ್ಯೆ- 17,338 ಮಕ್ಕಳಿಗೆ ಸೋಂಕು

4. ಬಳ್ಳಾರಿ- 11,04,071 ಜನಸಂಖ್ಯೆ- 15,749 ಮಕ್ಕಳಿಗೆ ಸೋಂಕು

5. ವಿಜಯಪುರ- 10,02,391 ಜನಸಂಖ್ಯೆ- 14,299 ಮಕ್ಕಳಿಗೆ ಸೋಂಕು

6. ತುಮಕೂರು- 9,48,423 ಜನಸಂಖ್ಯೆ- 13,529 ಮಕ್ಕಳಿಗೆ ಸೋಂಕು

7. ರಾಯಚೂರು- 9,19,631- 13,118 ಮಕ್ಕಳಿಗೆ ಸೋಂಕು

8. ಬಾಗಲಕೋಟೆ- 8,52,900ಜನಸಂಖ್ಯೆ- 12,166 ಮಕ್ಕಳಿಗೆ ಸೋಂಕು ತಗುಲಬಹುದು

9. ಬೀದರ್- 7,86,476 ಜನಸಂಖ್ಯೆ- 11,219 ಮಕ್ಕಳಿಗೆ ಸೋಂಕು ತಗುಲಬಹುದು

10. ದಾವಣಗೆರೆ- 7,57,255 ಜನಸಂಖ್ಯೆ- 10,802 ಮಕ್ಕಳಿಗೆ ಸೋಂಕು ತಗುಲಬಹುದು

 
 
 
 
 
 
 
 
 
 
 

Leave a Reply