ಶಾಸಕರಿಗೆ ಭದ್ರತೆ- ಮುಖ್ಯಮಂತ್ರಿ

ಬೆಂಗಳೂರು: ಕಳೆದ ರಾತ್ರಿ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಇಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮುಖ್ಯ ಮಂತ್ರಿ ಬಿ.ಎಸ್.ವೈ ಅವರನ್ನು ಭೇಟಿ ಮಾಡಿದ್ದು, ಪ್ರಕರಣದ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಕಠಿಣ ಕ್ರಮ: ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ನಡೆದ ಘರ್ಷಣೆಯ ಬಗ್ಗೆ ಪ್ರವೀಣ್ ಸೂದ್ ಅವರು ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿದ್ದು, ಈಗಾಗಲೇ 110ಕ್ಕೂ ಹೆಚ್ಚು ಗಲಭೆಕೋರರನ್ನು ಬಂಧಿಸಲಾಗಿದ್ದು, ಗಲಭೆಗೆ ಸೃಷ್ಟಿಸಿದವರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ಈ ಪ್ರಕರಣದ ಸಂಬಂಧ ಪೊಲೀಸರಿಗೆ ಸಿಎಂ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ಗಲಭೆಗೆ ಕಾರಣರಾದವರೆಲ್ಲರನ್ನು ಬಂಧಿಸಿ ಎಂದು ಸೂಚಿಸಿದ್ದಾರೆ.

ಶಾಸಕರಿಗೆ ಭದ್ರತೆ: ಶಾಸಕರು ಹಾಗೂ ಅವರ ಕುಟುಂಬದವರಿಗೆ ಭದ್ರತೆ ನೀಡಬೇಕೆಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.

Leave a Reply