ನಿನ್ನೆ ಇಳಿಕೆ~ಇಂದು ಏರಿಕೆ

ಬೆಂಗಳೂರು: ಕಳೆದೊಂದು ವಾರದಿಂದ ಏರುತ್ತಲೇ ಇದ್ದ ಕರೊನಾ ಪೀಡಿತರ ಸಂಖ್ಯೆ ಯಲ್ಲಿ ನಿನ್ನೆ ಭಾರಿ ಇಳಿಕೆಯಾಗಿ ನೆಮ್ಮದಿ ಮೂಡಿಸಿತ್ತು. ಆದರೆ ಇಂದು ಹೊಸ ದಾಖಲೆ ಬರೆದಿದೆ. ಒಂದೇ ದಿನದಲ್ಲಿ ಈವರೆಗಿನ ಅತ್ಯಧಿಕ 9 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಟ್ಟು ಸೋಂಕಿ ತರ ಸಂಖ್ಯೆ 3.50 ಲಕ್ಷ ದಾಟಿದೆ.

ನಿನ್ನೆಯ ಕೋವಿಡ್ ಸಂಖ್ಯೆ 6,495 ಆಗಿದ್ದರೆ, ಇಂದು ಕೋವಿಡ್ಗೆ ಒಳಗಾದವರು 9,058. ಜತೆಗೆ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ಕಡಿಮೆಯಾಗಿದೆ. ನಿನ್ನೆ 7,238 ಜನರು ಗುಣವಾಗಿದ್ದರೆ, ಇಂದು ಈ ಸಂಖ್ಯೆ 5,159ಕ್ಕೆ ಇಳಿದಿದೆ.

ರಾಜ್ಯದಲ್ಲಿ ಒಟ್ಟು ಕೋವಿಡ್ ಪೀಡಿತರ ಸಂಖ್ಯೆ 3,51,481 ಆಗಿದ್ದು, ಸಕ್ರಿಯ ಕೇಸು ಗಳ ಸಂಖ್ಯೆ ಕೂಡ 90,999ಕ್ಕೆ ಏರಿಕೆಯಾ ಗಿದೆ.

ಮೃತರ ಸಂಖ್ಯೆಯೂ ಹೆಚ್ಚಾಗಿದ್ದು, ಇಂದು 135 ಜನರು ಸಾವಿಗೀಡಾಗಿದ್ದಾರೆ. ನಿನ್ನೆ ಈ ಸಂಖ್ಯೆ 113 ಆಗಿತ್ತು. ಒಟ್ಟು ಸಾವಿನ ಸಂಖ್ಯೆ 5,837ಕ್ಕೆ ತಲುಪಿದೆ. ಸದ್ಯ 762 ಜನರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಧಾನಿಯಲ್ಲಿಯೂ ಹೊಸ ರೋಗಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಾಗಿದೆ. ನಿನ್ನೆ 1,862 ಜನರು ಸೋಂಕಿಗೆ ಒಳಗಾಗಿದ್ದರೆ, ಇಂದು ಈ ಸಂಖ್ಯೆ 2,967 ಆಗಿದೆ. ಒಟ್ಟು ಕೋವಿಡ್ ರೋಗಿಗಳ ಸಂಖ್ಯೆ 1,32,092ಕ್ಕೆ ತಲುಪಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ ನಿನ್ನೆ 2,422 ಆಗಿದ್ದರೆ, ಇಂದು ಇದರಲ್ಲಿ ಭಾರಿ ಇಳಿಕೆಯಾಗಿ 1,137 ಜನರಷ್ಟೇ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 91,180 ಜನರು ಗುಣವಾಗಿದ್ದಾರೆ. ಇನ್ನು ಇಂದು 40 ಜನರು ಸಾವಿಗೀಡಾಗುವ ಮೂಲಕ 2,005 ಜನರು ಕರೊನಾದಿಂದ ಮೃತಪಟ್ಟಂತಾಗಿದೆ.

Leave a Reply