ನಟಿ ಸಂಜನಾ-ಸಿಬಿಐ ಲಾಕ್ ಗ್ಯಾರಂಟೀನಾ

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿಯ ಬಳಿಕ ಇದೀಗ ಸ್ಯಾಂಡಲ್ವುಡ್ ನಟಿ ಸಂಜನಾ ಸರದಿ!

ಇಂದು ಮುಂಜಾನೆ ಬೆಂಗಳೂರಿನ ಇಂದಿರಾ ನಗರದಲ್ಲಿರುವ ನಟಿ ಸಂಜನಾ ಮನೆಯ ಮೇಲೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬ ರಗಿ ಸಂಜನಾ ಕೂಡ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಬಳಿಕ ಇಬ್ಬರ ನಡುವೆ ಆರೋಪ ಪ್ರತ್ಯಾ ರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿತ್ತು.

ಸಂಜನಾಳಿಗೆ ಉಡುಪಿಯ ನಂಟು: ಉಡುಪಿಯಾದ್ಯಂತ ಈಗ ಸಂಜನಾಳ ಬಗ್ಗೆ ಗುಸು ಗುಸು. ಈ ಹಿಂದೆ ಉಡುಪಿಯಲ್ಲೂ ಹಲವಾರು ಕಡೆ ಚಿತ್ರೀಕರಣದಲ್ಲಿ ಭಾಗವಹಿ ಸಿದ್ದಳು. ಕಳೆದ ಒಂದು ತಿಂಗಳಿನಿಂದ ಉಡುಪಿ ಜಿಲ್ಲೆಯಲ್ಲಿ ಪೊಲೀಸರು ದಾಖಲೆ ಮಟ್ಟದ ಗಾಂಜಾ ವಶಪಡಿಸಿ ಕೊಂಡಿದ್ದಾರೆ. ರಾಜ್ಯದಲ್ಲಿ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಹಲವು ಗಾಸಿಪ್ ಗಳು ಈಗ ಉಡುಪಿ ಜಿಲ್ಲೆಯಾದ್ಯಂತ ಹರಡುತ್ತಿದೆ.

 
 
 
 
 
 
 
 
 
 
 

Leave a Reply